ಮುದ್ದು ಕಂದನಿಗೆ ಹೃದಯ ಸಮಸ್ಯೆ!

7

ಮುದ್ದು ಕಂದನಿಗೆ ಹೃದಯ ಸಮಸ್ಯೆ!

Published:
Updated:

ಶಹಾಬಾದ: ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದ ಆರು ತಿಂಗಳ ಹೆಣ್ಣು ಕಂದಮ್ಮ ಕಸ್ತೂರಿಗೆ ಹುಟ್ಟುತ್ತಲೆ ಹೃದಯ ಕಾಯಿಲೆ!ಎಳೆಯ ಕಂದ ಕಸ್ತೂರಿ ಕಣ್ಣಲ್ಲಿ ಜೀವ ಹಿಡಿದು ಗುಬ್ಬಿಯಂತೆ ಮಡಿಲಲ್ಲಿದೆ. ಕರುಳ ಕುಡಿಯನ್ನು ಉಳಿಸಿಕೊಳ್ಳಲು ಪೋಷಕರು ಹರಸಾಹಸ ಮಾಡುತ್ತಿದ್ದು ಸಹಾಯ ಹಸ್ತಗಳಿಗೆ ಕಾದು ಕೂತಿದ್ದಾರೆ. ಭಂಕೂರನ ರಮೇಶ ಮನೋಹರ ಹಾಗೂ ಮಲ್ಲಮ್ಮ ದಂಪತಿಗಳಿಗೆ ಒಟ್ಟು ಮೂರು ಮಕ್ಕಳು. ಎಂಟು ಮತ್ತು ಐದು ವರ್ಷದ ಇಬ್ಬರು ಹೆಣ್ಣು ಮಕ್ಕಳು ಆರೋಗ್ಯದಿಂದ ಇವೆ. ಮೂರನೆ ಮಗು ಆರೋಗ್ಯ ಸಮಸ್ಯೆಯನ್ನು ಬೆನ್ನಿಗೆ ಕಟ್ಟಿಕೊಂಡೆ ಬಂದಿದೆ.ಮನುಷ್ಯ ಪ್ರಪಂಚದ ಅರಿವೆ ಇಲ್ಲದ ಕಸ್ತೂರಿ ತೇಗುಸಿರು ಬಿಡುತ್ತ, ಪಿಳಿಪಿಳಿ ಕಣ್ಣ ರೆಪ್ಪೆ ಬಡಿಯುತ್ತ ಜೀವ ಹಿಡಿದಿದೆ!

`ಸ್ಥಳೀಯ ಮಕ್ಕಳ ವೈದ್ಯರಲ್ಲಿ ಆರಂಭದಲ್ಲೆ ತೋರಿಸಿದೆವು. ಸದ್ಯ ಶಸ್ತ್ರಚಿಕಿತ್ಸೆ ಬೇಡ ಎಂದದಕ್ಕೆ ಸ್ವಲ್ಪ ದಿನ ಕಾದೆವು. ನಂತರ ಬಿಜಾಪುರ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಪಾಸಣೆ ಮಾಡಿಸಿದೆವು. ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಮಗೆ ಶಕ್ತಿ ಇಲ್ಲ~ ಎಂದು ಮಗುವಿನ ತಾಯಿ ಮಲ್ಲಮ್ಮ ಹೇಳುತ್ತಾರೆ.`ಮಗುವಿನ ತಂದೆ ರಮೇಶ ಮನೋಹರ ಬುಕ್ ಬೈಂಡಿಂಗ್ ಮಾಡಿಕೊಂಡು, ಆರ್ಥಿಕ ಸಮಸ್ಯೆಯಿಂದ ಇರುವ ವ್ಯಕ್ತಿ. ಮಗುವನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ದಾನಿಗಳ ಮೂಲಕ ಹಣ ಸಂಗ್ರಹಿಸಿ ಕೊಡುವ ಪ್ರಯತ್ನಗಳು ನಡೆದಿವೆ~ ಎಂದು ಸಮಸ್ಯೆಗೆ ಸ್ಪಂದಿಸಿರುವ ಸಾಮಾಜಿಕ ಕಾರ್ಯಕರ್ತ ಈರಣ್ಣ ಕಾರ್ಗಿಲ್ `ಪ್ರಜಾವಾಣಿ~ಗೆ   ತಿಳಿಸಿದರು.ಧನ ಸಹಾಯ ನೀಡುವವರು ಮಲ್ಲಮ್ಮನ ಎಸ್‌ಬಿಐ ಭಂಕೂರ ಶಾಖೆ ಖಾತೆ ಸಂಖ್ಯೆ: 30984245971 ಕಳುಹಿ ಸಬಹುದು. ವಿವರಗಳಿಗೆ ರಮೇಶ ಮನೋಹರ -95910 93576 ಅಥವಾ ಈರಣ್ಣ ಕಾರ್ಗಿಲ್ -9740308222 ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry