ಮುದ್ದು ರಾಕ್ಷಸಿ ಸ್ಕಂಕ್

ಶನಿವಾರ, ಜೂಲೈ 20, 2019
22 °C

ಮುದ್ದು ರಾಕ್ಷಸಿ ಸ್ಕಂಕ್

Published:
Updated:

ಕಪ್ಪು ಬಣ್ಣ, ಮೈಮೇಲೆ ಬಿಳಿಬಣ್ಣದ ಪಟ್ಟೆಗಳು, ಮುಖದ ಮೇಲೆ ನಾಮದಂಥ ಗೀಟು, ಪುಕ್ಕದಂಥ ಬಾಲದಲ್ಲಿ ಬಿಳಿ ಕಪ್ಪು ಮಿಶ್ರಿತ ಕೂದಲುಗಳು. ಇದು ಸ್ಕಂಕ್ ಹೆಸರಿನ ಪ್ರಾಣಿ. ಎಷ್ಟು ಮುದ್ದಾಗಿದೆ ಎಂದು ಹತ್ತಿರಕ್ಕೆ ಹೋದರೆ ಅಪಾಯ ಖಂಡಿತ.ಶತ್ರುವಿನಿಂದ ತಪ್ಪಿಸಿಕೊಳ್ಳಲು ಈ ಸ್ಕಂಕ್ ತನ್ನ ಬಾಲದ ಕೆಳಭಾಗದಲ್ಲಿ ಇರುವ ಎರಡು ಗ್ರಂಥಿಗಳಿಂದ ರಾಸಾಯನಿಕ ದ್ರವವನ್ನು ಹೊರಕ್ಕೆ ಚಿಮ್ಮಿಸುತ್ತದೆ. ಆ ದ್ರವ ನಾಲ್ಕೂವರೆ ಮೀಟರ್ ಎತ್ತರಕ್ಕೆ ಚಿಮ್ಮಬಲ್ಲದು. ಆ ದ್ರವದ ದುರ್ವಾಸನೆಯಿಂದ ಉಸಿರುಕಟ್ಟಿ, ಕೆಲಕ್ಷಣ ಕಣ್ಣುಕುರುಡಾದಂಥ ಭಾವ ಆವರಿಸುತ್ತದೆ.

 

ತಕ್ಷಣ ಸ್ಕಂಕ್ ಕಣ್ತಪ್ಪಿಸಿ ಹೋಗುತ್ತದೆ.ಸ್ಕಂಕ್ ಪ್ರಾಣಿಯ 12 ಪ್ರಬೇಧಗಳಿವೆ. ಕಂದು ಬಣ್ಣದ, ಚುಕ್ಕೆಗಳಿರುವ ಸ್ಕಂಕ್‌ಗಳು ಅವುಗಳಲ್ಲಿ ಸೇರಿವೆ. ಇಂಡೋನೇಷಿಯಾ ಮತ್ತು ಪಿಲಿಪ್ಪೀನ್ಸ್‌ನಲ್ಲಿ ಕೆಲವು ವಿಧ ಮತ್ತು ಕೆನಡಾ ಮತ್ತು ದಕ್ಷಿಣ ಅಮೆರಿಕದಲ್ಲಿ ಕೆಲವು ಸ್ಕಂಕ್‌ಗಳು ಕಂಡುಬಂದಿವೆ.

 

ಹವಾಮಾನ ಬದಲಾದಂತೆ ಅವುಗಳ ಆಹಾರ ಕ್ರಮವೂ ಬದಲಾಗುತ್ತದೆ. ಎಲೆ ಹಣ್ಣು, ಕಾಂಡ, ಸಸ್ಯಗಳು ಮತ್ತು ಎರೆಹುಳು, ಲಾರ್ವಾ, ಕಪ್ಪೆ, ಮೊಟ್ಟೆ, ಪಕ್ಷಿ, ಹಾವುಗಳು ಅವುಗಳ ಆಹಾರ. ಸಾಕುಪ್ರಾಣಿಗಳಾಗುತ್ತಿರುವುದು ಮತ್ತು ತುಪ್ಪಳಕ್ಕಾಗಿ ಕಗ್ಗೊಲೆಯಾಗುತ್ತಿರುವುದು ಅವುಗಳ ಸಂಖ್ಯೆ ಇಳಿಮುಖವಾಗಲು ಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry