ಮುದ್ದೇಬಿಹಾಳ ತಾಲ್ಲೂಕು: 31 ಗ್ರಾಮ ಪಂಚಾಯಿತಿ ಮೀಸಲು ಪಟ್ಟಿ

7

ಮುದ್ದೇಬಿಹಾಳ ತಾಲ್ಲೂಕು: 31 ಗ್ರಾಮ ಪಂಚಾಯಿತಿ ಮೀಸಲು ಪಟ್ಟಿ

Published:
Updated:

ಮುದ್ದೇಬಿಹಾಳ: ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಲಾಟರಿ ಎತ್ತುವ ಮೂಲಕ  ಪ್ರಕಟಿಸಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿ ಪ್ರಕಟಣೆ  ನಡೆಯಿತು.ತಾಲ್ಲೂಕಿನ ಇಂಗಳಗೇರಿ ಮತ್ತು ಬಿದರಕುಂದಿ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಯಿತು. ಭಂಟನೂರ, ಹಿರೂರ, ಮಡಿಕೇಶ್ವರ, ಕಾಳಗಿ, ಢವಳಗಿ, ಮೂಕಿಹಾಳ, ನಾಗಬೇನಾಳ, ಹಿರೇಮುರಾಳ, ಯರಝರಿ, ರಕ್ಕಸಗಿ, ಕೋಳುರ ಮತ್ತು ತಂಗಡಗಿ ಪಂಚಾಯಿತಿಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಯಿತು.ಕೊಣ್ಣೂರ, ಕೊಡಗಾನೂರ, ತುಂಬಗಿ, ಬಾವೂರ, ಮಿಣಜಗಿ, ಬಿ.ಸಾಲವಾಡಗಿ, ರೂಢಗಿ, ಕುಂಟೋಜಿ, ಕವಡಿಮಟ್ಟಿ, ನಾಲತ ವಾಡ, ಯಲಗೂರ, ಹುಲ್ಲೂರ ಮತ್ತು ಬಿಜ್ಜೂರ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾದವು. ಬಸರಕೋಡ, ಆಲೂರ ಮತ್ತು ಹಡಲಗೇರಿ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಪುರುಷರಿಗೆ ಮೀಸಲಾದವು.30 ಗ್ರಾಪಂ ಗಳಿಗೆ 2010 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆದರೆ ಇಂಗಳಗೇರಿ ಗ್ರಾಪಂಗೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣೆ ನಡೆದಿರಲಿಲ್ಲ.ಕೆಲ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಎರಡನೇ ಅವಧಿಗೂ ಪುನರಾವರ್ತನೆಯಾಗಿದ್ದರಿಂದ ಆಯಾ ಪಂಚಾಯಿತಿಗಳ ಸದಸ್ಯರು ಆಕ್ಷೇಪಣೆ ಎತ್ತಿ ಬದಲಾಯಿಸುವಂತೆ ಮನವಿ ಮಾಡಿದರು.ಉಪ ವಿಭಾಗಾಧಿಕಾರಿ ಡಾ.ಎಚ್. ಬಿ. ಬೂದೆಪ್ಪ, ತಹಶೀಲ್ದಾರ ಸೋಮಲಿಂಗ ಗೆಣ್ಣೂರ, ತಾಳಿಕೋಟೆ ವಿಶೇಷ ತಹಶೀಲ್ದಾರ ಎಂ.ಎ.ಎಸ್. ಬಾಗವಾನ, ಜಿಲ್ಲಾಧಿಕಾರಿಗಳ ಸ್ಥಾನಿಕ ಸಹಾಯಕ ಚೋರಗಸ್ತಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಕಮಹಾದೇವಿ ಹೊಕ್ರಾಣಿ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry