ಮಂಗಳವಾರ, ಮೇ 24, 2022
25 °C

ಮುನವಳ್ಳಿ: ಪತ್ರಿಕಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನವಳ್ಳಿ: ಪ್ರಕೃತಿ ವಿಕೋಪ ಸೇರಿದಂತೆ ಕಷ್ಟಕರ ಸಂದರ್ಭದಲ್ಲಿಯೂ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಪತ್ರಕರ್ತರಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ಶಾಸಕ ಆನಂದ ಮಾಮನಿ ಅಭಿಪ್ರಾಯಪಟ್ಟರು.ಸಮೀಪದ ಸೋಮಶೇಖರ ಮಠದಲ್ಲಿ ಸೋಮವಾರ ಸವದತ್ತಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಲು ತಾವೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಸಮನ್ವಯಾಧಿಕಾರಿ ಆರ್.ಆರ್.ಸದಲಗಿ ಮಾತನಾಡಿ, ಪತ್ರಕರ್ತರಲ್ಲಿ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಗುಣ ಹಾಗೂ ಅಧ್ಯಯನಶೀಲತೆ ಇರಬೇಕು ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಸಹಕಾರಿ ಧುರೀಣ ಉಮೇಶ ಬಾಳಿ ಸಹ ಮಾತನಾಡಿದರು.ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಪೂಜ್ಯರು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪುಂಡಲೀಕ ಬಾಳೋಜಿ ವಹಿಸಿದ್ದರು.ಶಾಸಕರಾದ ಆನಂದ ಮಾಮನಿ, ಡಾ.ವಿಶ್ವನಾಥ ಈರನಗೌಡ ಪಾಟೀಲ ಹಾಗೂ  ಪತ್ರಕರ್ತ ಟಿ.ಎನ್.ಮುರಂಕರ ದಂಪತಿಯನ್ನು ಇದೇಸಂದರ್ಭದಲ್ಲಿ ಸನ್ಮಾನಿಸಲಾಯಿತು.ಜಿಪಂ ಸದಸ್ಯ ರವೀಂದ್ರ ಯಲಿಗಾರ, ಗ್ರಾಪಂ ಅಧ್ಯಕ್ಷ ದುಂಡಪ್ಪ ಬುರ್ಜಿ, ಕಟಕೋಳದ ಟಿ.ಪಿ.ಮನೋಳಿ, ಯಲ್ಲಪ್ಪ ತಳವಾರ, ದಿಲೀಪ ಕುಂದರವಾಡಿ, ಬಸವೇಶ್ವರ ಸೊಸೈಟಿ ಅಧ್ಯಕ್ಷ ರಮೇಶ ಗೋಮಾಡಿ, ಎಪಿಎಂಸಿ ನಿರ್ದೇಶಕ ನಿಂಗನಗೌಡ ಮಲಗೌಡ್ರ, ಸಿ.ಆರ್.ಪಾಟೀಲ, ಮಹಾದೇವರಾವ್ ಘೇವಡೆ ಅತಿಥಿಗಳಾಗಿ  ಆಗಮಿಸಿದ್ದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಮಹಾಂತೇಶ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿ ಎಚ್.ಖೊಂದುನಾಯ್ಕ ಸ್ವಾಗತಿಸಿದರು. ಬಸನಗೌಡ ಬಿ.ಹುಲಿಗೊಪ್ಪ ನಿರೂಪಿಸಿದರು. ಪ್ರಶಾಂತ ತುಳಜಣ್ಣವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.