ಗುರುವಾರ , ಜೂನ್ 17, 2021
21 °C

ಮುನಿಯಪ್ಪ ಪತ್ನಿ ಆದಾಯವೇ ಹೆಚ್ಚು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.­ಮುನಿ­ಯಪ್ಪ ತಮ್ಮ ಪತ್ನಿಗಿಂತಲೂ ಕಡಿಮೆ ಆದಾಯ ಹೊಂದಿದ್ದಾರೆ. ಆದರೆ ತಮ್ಮ ಪತ್ನಿ ಎಂ.ನಾಗರತ್ನಮ್ಮ ಅವರಿಗೆ  ₨ 14.14 ಲಕ್ಷವನ್ನು ಸಾಲ ನೀಡಿ­ದ್ದಾರೆ, ಮುನಿಯಪ್ಪ ಬಳಿ ₨ 86.33 ಲಕ್ಷದಷ್ಟು ಚರಾಸ್ತಿ, ಪತ್ನಿ ಬಳಿ ₨ 1.05 ಕೋಟಿಯಷ್ಟು ಚರಾಸ್ತಿ ಇದೆ.ಅವರು ಬುಧವಾರ ನಾಮಪತ್ರದ ಜೊತೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಮತ್ತು ಕುಟುಂಬ­ದ­ವರ ಆಸ್ತಿ ವಿವರ ನೀಡಿದ್ದಾರೆ. 2012–13ನೇ ಸಾಲಿನಲ್ಲಿ ಮುನಿ­ಯಪ್ಪ ತೆರಿಗೆ ಸಲ್ಲಿಸುವ ಸಂದರ್ಭ­ದಲ್ಲಿ ಅವರ ಆದಾಯ ₨ 23,­15,190. ಅದೇ ವರ್ಷ  ಅವರ ಪತ್ನಿ ಎಂ.ನಾಗರತ್ನಮ್ಮ ಆದಾಯ ₨ 50,87,704. ಮಗಳು ಎಂ.­ನಿರ್ಮಲಾ ಅವರಿಗೆ ಯಾವುದೇ ಆದಾಯವಿಲ್ಲ.ಮುನಿಯಪ್ಪ ಆಸ್ತಿ: ಅವರ ಬಳಿ ಈಗ ₨28.78 ಲಕ್ಷವಿದೆ. ಬ್ಯಾಂಕ್‌ ಉಳಿ­ತಾಯ ಖಾತೆಯಲ್ಲಿ ₨6.51 ಲಕ್ಷವಿದೆ.  ₨2.22 ಲಕ್ಷ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣ­ಪತ್ರವಿದೆ. ₨2.63 ಲಕ್ಷ ಮೌಲ್ಯದ ಫೋರ್ಡ್ ಐಕಾನ್‌ ಕಾ­ರಿದೆ­.  ₨41.­­­54 ­ಲಕ್ಷದಷ್ಟು ಕಚೇರಿ ಆಸ್ತಿ, ₨4.35 ­ಲಕ್ಷದಷ್ಟು ಗೃಹಬಳಕೆ ಆಸ್ತಿ ಇದೆ. ಸ್ಥಿರಾಸ್ತಿ: ಬಾಶೆಟ್ಟಿಹಳ್ಳಿ ಮತ್ತು ಕಂಬದಹಳ್ಳಿಯಲ್ಲಿ ಪಿತ್ರಾರ್ಜಿತವಾದ 4.18 ಎಕರೆ, ಸರ್ಕಾರದಿಂದ ಮಂಜೂ­ರಾದ 4 ಎಕರೆ ಕೃಷಿ ಜಮೀನಿದೆ. ಅವುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ₨ 21.30 ಲಕ್ಷ ವ್ಯಯಿಸಲಾಗಿದೆ. ಅದರ ಒಟ್ಟಾರೆ ಮೌಲ್ಯ ₨ 40 ಲಕ್ಷ.

ಬೆಂಗಳೂರಿನ ಬನಶಂಕರಿ 2ನೇ ಹಂತದ ಸರ್ವೇ ನಂ 17ರ 10 ಸಾವಿರದ ಚದರಡಿ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಅದಕ್ಕಾಗಿ ₨ 1.95 ಕೋಟಿ ವಿನಿ­ಯೋಗಿ­ಸಿ­ದ್ದಾರೆ. 2002ರ ನವೆಂಬರ್‌ನಲ್ಲಿ ನಿವೇಶನ ಖರೀದಿಸು­ವಾಗ ಅದರ ಬೆಲೆ ₨ 7.92 ಲಕ್ಷ. ಈಗಿನ ಮೌಲ್ಯ ಸುಮಾರು ₨ 4 ಕೋಟಿ. ಅವರು ಹೊಂದಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ ₨ 4.40 ಕೋಟಿ.ಸಾಲ: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಸಾಲ, ಆಕ್ಸಿಸ್‌ ಬ್ಯಾಂಕ್‌ನಿಂದ ಪಡೆದ ಮುಂಗಡ ಸೇರಿ ₨ 2.25 ಕೋಟಿ ಸಾಲ ಪಡೆದಿದ್ದಾರೆ.ಪತ್ನಿ ಆಸ್ತಿ: ಪತ್ನಿ ನಾಗರತ್ನಮ್ಮ ಅವರ ಬಳಿ ₨ 1.17 ಲಕ್ಷ ಹಣ ಇದೆ. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ₨ 10 ಸಾವಿರವಿದೆ. ನಟರಾಜ ಎಂಟರ್‌­ಪ್ರೈಸಸ್‌ನಲ್ಲಿ ₨ 97.64 ಲಕ್ಷ ಹೂಡಿದ್ದಾರೆ. ಎಲ್‌ಐಸಿಯಲ್ಲಿ ₨ 1.25 ಲಕ್ಷ ಮತ್ತು 1.25 ಲಕ್ಷ ಹೂಡಿದ್ದಾರೆ. ಪತಿ ಮುನಿಯಪ್ಪ ಅವರಿಂದ ₨ 14.14 ಲಕ್ಷ ಸಾಲ ಪಡೆದಿದ್ದಾರೆ. ನಟರಾಜ ಎಂಟರ್ ಪ್ರೈಸಸ್‌ನ ಬ್ಯಾಲೆನ್ಸ್ ಶೀಟ್‌ನಲ್ಲಿ­ರುವಂತೆ ₨ 63.79 ಲಕ್ಷ ಮೌಲ್ಯದ ವಾಹನಗಳಿವೆ. ₨ 23.50 ಲಕ್ಷ ಮೌಲ್ಯದ 750 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಒಡವೆಗಳಿವೆ.ಸ್ಥಿರಾಸ್ತಿ: 2006, 2008 ಮತ್ತು 2011ರಲ್ಲಿ ಅವರು ₨ 10.33 ಲಕ್ಷ ನೀಡಿ ಗೊರ್ಮಿಳ್ಳಹಳ್ಳಿಯಲ್ಲಿ ಖರೀದಿಸಿರುವ 17 ಎಕರೆ 8 ಗುಂಟೆ ಕೃಷಿ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ₨ 85.40 ಲಕ್ಷ. 1994–95ರಲ್ಲಿ ತಿಂಡ್ಲು ಗ್ರಾಮದಲ್ಲಿ ₨7.58 ಲಕ್ಷ ನೀಡಿ ಖರೀದಿಸಿದ 14 ಗುಂಟೆ ಜಮೀನಿನ ಈಗಿನ ಮಾರುಕಟ್ಟೆ ಮೌಲ್ಯ ₨ 1.52 ಕೋಟಿ. ಬೆಂಗಳೂರಿನ ಯಲಹಂಕ ಹೊಸ ಬಡಾವಣೆಯ 2400 ಚದರಡಿ ನಿವೇಶನದ 2000 ಚದರಡಿಯಲ್ಲಿ ₨ 29.15 ಲಕ್ಷ ಮೌಲ್ಯದ ಕಚೇರಿ ಕಟ್ಟಡ ಹೊಂದಿದ್ದಾರೆ. 2010ರ ನವೆಂಬ­ರಿನಲ್ಲಿ ನಿವೇಶನ ಖರೀದಿಸಿ­ದಾಗ ಅದರ ಬೆಲೆ ₨ 36.63 ಲಕ್ಷ. ಈಗಿನ ಬೆಲೆ ₨ 1.44 ಕೋಟಿ. ಬೆಂಗ­ಳೂರಿನ ಎಸ್‌ವಿ ಬಡಾವಣೆ, ಸಂಜಯನಗರ, ಪೋಸ್ಟಲ್ ಕಾಲೊನಿ, ಸಹಕಾರಿ ನಗರ, ಶಿಡ್ಲಘಟ್ಟದ ಕಂಬದ­ಹಳ್ಳಿಯಲ್ಲಿ ಅವರು ವಸತಿಗೃಹ ಹೊಂದಿದ್ದಾರೆ, ಒಟ್ಟು ಸ್ಥಿರಾಸ್ತಿ­ಗಳ ಮೌಲ್ಯ ₨ 11.11 ಕೋಟಿ.ಸಾಲ: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ₨ 3.31 ಲಕ್ಷ ಸೇರಿದಂತೆ ₨ 52.81 ಲಕ್ಷ ಸಾಲವಿದೆ. ಮಗಳ ಆಸ್ತಿ: ಮಗಳು ನಿರ್ಮ­ಲಾ  ­ಬಳಿ ₨ 5.60 ಲಕ್ಷ ಮೌ­ಲ್ಯದ 200 ಗ್ರಾಂ ಚಿನ್ನದ ಒಡವೆಗಳಿವೆ.‘‘ಆರು ಬಾರಿ ಲೋಕಸಭೆ ಪ್ರತಿನಿಧಿಸಿರುವ ಹಾಗೂ ಎರಡು ಬಾರಿ ಕೇಂದ್ರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರು ತಮ್ಮ ಪತ್ನಿಗಿಂತಲೂ ಕಡಿಮೆ ಆದಾಯ ಹೊಂದಿದ್ದಾರೆ. ಆದರೆ ಪತ್ನಿ ಎಂ.ನಾಗರತ್ನಮ್ಮ ಅವರಿಗೆ ₨ 14.14 ಲಕ್ಷ ಸಾಲ ನೀಡಿದ್ದಾರೆ.

ಮುನಿಯಪ್ಪ ಬಳಿ ₨ 86.33 ಲಕ್ಷದಷ್ಟು ಚರಾಸ್ತಿ, ₨ 4.40 ಕೋಟಿ ಸ್ಥಿರಾಸ್ತಿ ಸೇರಿದಂತೆ ಒಟ್ಟು ₨ 5.26 ಕೋಟಿ ಮೌಲ್ಯದ ಆಸ್ತಿ ಇದೆ. ಪತ್ನಿ ಬಳಿ ₨ 1.5 ಕೋಟಿ ಚರಾಸ್ತಿ, ₨ 11.11 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₨ 12.61 ಕೋಟಿ ಆಸ್ತಿ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.