ಮುನಿರಾಬಾದ್: ರಾಷ್ಟ್ರೀಯ ಮತದಾರರ ದಿನ

7

ಮುನಿರಾಬಾದ್: ರಾಷ್ಟ್ರೀಯ ಮತದಾರರ ದಿನ

Published:
Updated:

ಮುನಿರಾಬಾದ್: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ “ರಾಷ್ಟ್ರೀಯ ಮತದಾರರ ದಿನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಮತದಾನದ ಉದ್ದೇಶ ಮತ್ತು ಪಾವಿತ್ರತೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ನೂತನ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಮುನಿರಾಬಾದ್ ಸಿಆರ್‌ಪಿ ಕೆ.ಎಮ್.ಗಡಗಿ ಪ್ರಾಸ್ತಾವಿಕ ಮಾತನಾಡಿದರು. ಹಿಟ್ನಾಳ ಸಿಆರ್‌ಪಿ ಉಮೇಶ ಸುರ್ವೆ ನೂತನ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಬೆಲ್ಲದ, ಎಸ್‌ಡಿಎಂಸಿ ಅಧ್ಯಕ್ಷೆ ಉಮಾ ಅಶೋಕ, ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾನು ಚಂದುಸಾಬ್, ಮೋಹಿನ್, ಹುಲುಗಯ್ಯ, ಪರಶುರಾಮ, ಬಿಸ್ಮಲ್ಲಾಖಾನ್, ಪ್ರಭಾರಿ ಮುಖ್ಯ ಶಿಕ್ಷಕಿ ರೇಣುಕಾ ಸುರ್ವೆ, ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳಾದ ಶರಣಪ್ಪ, ದುರ್ಗಾಪ್ರಸಾದ, ಸಿದ್ದಮ್ಮ, ರುದ್ರಮ್ಮ, ಶಾರದಾ, ಲಕ್ಷ್ಮಿದೇವಿ ಉಪಸ್ಥಿತರಿದ್ದರು.

 

ಅನುಷಾ, ಭಾಗ್ಯಶ್ರೀ ಪ್ರಾರ್ಥಿಸಿದರು. ಶರಣಪ್ಪ ಸ್ವಾಗತಿಸಿದರು. ಬೂತ್ ಮಟ್ಟದ ಅಧಿಕಾರಿ ಬಾಳಪ್ಪ ತಳವಾರ ನಿರೂಪಿಸಿದರು. ದುರ್ಗಾಪ್ರಸಾದ ವಂದಿಸಿದರು. ಹೊಸಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ “ರಾಷ್ಟ್ರೀಯ ಮತದಾರರ ದಿನ”ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೂತ್ ಲೆವೆಲ್ ಆಫೀಸರ್ ಅಂದಾನಗೌಡ ಪಾಟೀಲ್ ಹೊಸ ಮತದಾರರಿಗೆ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿಯನ್ನು ಸಾಂಕೇತಿಕವಾಗಿ ವಿತರಿಸಿ, ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

 

ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಗ್ರಾಮ ಪಂಚಾಯಿತಿ ಮತ್ತು ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕಿ ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry