ಮುನಿಸು ಇಲ್ಲ: ಸುರೇಶ್‌ಕುಮಾರ್

7

ಮುನಿಸು ಇಲ್ಲ: ಸುರೇಶ್‌ಕುಮಾರ್

Published:
Updated:

ಬೆಂಗಳೂರು: `ಕಾನೂನು ಸಚಿವನಾಗಿ ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನಗೆ ಯಾವೊಬ್ಬ ಸಚಿವರ ಜತೆಗೂ ವೈಮನಸ್ಸು ಇಲ್ಲ~ ಎಂದು ಸಚಿವ ಸುರೇಶಕುಮಾರ್ ಪ್ರತಿಕ್ರಿಯೆ ನೀಡಿದರು.`ಕಾವೇರಿ ಕುರಿತಾದ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲೂ ಹಾಜರಿದ್ದು, ಕಾನೂನು ಸಚಿವನ ಪಾತ್ರ ನಿರ್ವಹಿಸಿದ್ದೇನೆ. ಜಲಸಂಪನ್ಮೂಲ ಸಚಿವರ ಜತೆಗೂ ನಿರಂತರ ಸಂಪರ್ಕದಲ್ಲಿದ್ದೇನೆ~ ಎಂದು  ಹೇಳಿದರು.ಕಾವೇರಿ ನದಿ ಪ್ರಾಧಿಕಾರದ ಆದೇಶ ಹೊರಬಿದ್ದ ನಂತರ ನಡೆದ ಹಲವು ಪ್ರಮುಖ ಸಭೆಗಳಿಗೆ ಕಾನೂನು ಸಚಿವ ಸುರೇಶಕುಮಾರ್ ಅವರನ್ನು ಆಹ್ವಾನಿಸಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಕೂಡ ಸಭೆಗಳಿಂದ ದೂರು ಉಳಿದಿದ್ದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.ಮಾಧ್ಯಮಗಳಲ್ಲಿ ಕಾನೂನು ಸಚಿವರೇ ಕಾಣಿಸುತ್ತಿಲ್ಲ ಎನ್ನುವ ಸುದ್ದಿ ಬಿತ್ತರಗೊಂಡ ನಂತರ ದೆಹಲಿಗೆ ಸುರೇಶಕುಮಾರ್ ಅವರಿಗೂ ಆಹ್ವಾನ ನೀಡಿದ್ದು, ಅವರು ಭಾನುವಾರ ರಾತ್ರಿಯೇ ದೆಹಲಿಗೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry