ಗುರುವಾರ , ಜೂನ್ 24, 2021
25 °C

ಮುನ್ನಡೆಯಲ್ಲಿ ತ್ರಿಶೂಲ್ ಚಿನ್ನಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಗಾಂವ್ (ಐಎಎನ್‌ಎಸ್): ಬೆಂಗಳೂರಿನ ತ್ರಿಶೂಲ್ ಚಿನ್ನಪ್ಪ (142) ಇಲ್ಲಿ ನಡೆಯುತ್ತಿರುವ ನಾರ್ದರ್ನ್ ಇಂಡಿಯಾ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.

ಬುಧವಾರ ಪ್ರಭಾವಿ ಪ್ರದರ್ಶನ ನೀಡಿದ ತ್ರಿಶೂಲ್ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಅವರು ಮೊದಲ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಇಷ್ಟೇ ಸ್ಟ್ರೋಕ್‌ಗಳನ್ನು ಬಳಸಿಕೊಂಡಿದ್ದರು.

ಬೆಂಗಳೂರಿನ ಇನ್ನೊಬ್ಬ ಸ್ಪರ್ಧಿ ಎಸ್. ಚಿಕ್ಕರಂಗಪ್ಪ (145) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ (74) ಅಲ್ಪ ನಿರಾಸೆ ಅನುಭವಿಸಿದ್ದ ಚಿಕ್ಕರಂಗಪ್ಪ ಬುಧವಾರ ಪ್ರಭಾವಿ ಪ್ರದರ್ಶನ ನೀಡಿ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಮೊದಲ ಸುತ್ತಿನ ಬಳಿಕ ಜಂಟಿ ಎರಡನೇ ಸ್ಥಾನದಲ್ಲಿದ್ದ ಖಾಲಿನ್ ಜೋಷಿ ಮತ್ತು ಹರಿಮೋಹನ್ ಸಿಂಗ್ ಅವರು ಜಂಟಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.