ಬುಧವಾರ, ಜನವರಿ 22, 2020
23 °C

ಮುನ್ನಡೆಯಲ್ಲಿ ಶಬ್ಬೀರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡಿನ ಶಬ್ಬೀರ್‌ ಧನ್ಕೋಟ್‌ ಇಲ್ಲಿ ಆರಂಭ ವಾದ 25ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನ ಮೊದಲ ದಿನ ಪ್ರಭಾವಿ ಪ್ರದರ್ಶನ ನೀಡಿದ್ದಾರೆ.



ಒರಾಯನ್‌ ಮಾಲ್‌ನ ‘ಬ್ಲೂ ಒ’ ಬೌಲಿಂಗ್‌ ಸೆಂಟರ್‌ನಲ್ಲಿ ಮಂಗಳ ವಾರ ನಡೆದ ಪುರುಷರ ವಿಭಾಗದ ಆರು ಗೇಮ್‌ಗಳ ಬಳಿಕ ಶಬ್ಬೀರ್‌ ಒಟ್ಟು 1347 ಪಾಯಿಂಟ್‌ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.



ಕರ್ನಾಟಕದ ಸ್ಪರ್ಧಿಗಳಾದ ಹುನೆದ್‌ ಖೋಕರ್‌ ಮತ್ತು ಆಕಾಶ್‌ ಅಶೋಕ್ ಕುಮಾರ್‌ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿದ್ದಾರೆ. ಹುನೆದ್‌ 1185 ಪಾಯಿಂಟ್‌ ಮತ್ತು ಆಕಾಶ್‌ 1180 ಪಾಯಿಂಟ್‌ ಸಂಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)