ಮುನ್ನಡೆ ಕಾಪಾಡಿಕೊಂಡ ತ್ರಿಶೂಲ್

7
ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್

ಮುನ್ನಡೆ ಕಾಪಾಡಿಕೊಂಡ ತ್ರಿಶೂಲ್

Published:
Updated:

ಬೆಂಗಳೂರು: ಪ್ರದರ್ಶನದಲ್ಲಿ  ಸ್ಥಿರತೆ ಕಾಪಾಡಿಕೊಂಡ ತ್ರಿಶೂಲ್‌ ಚಿಣ್ಣಪ್ಪ ಟಾಟಾ ಸ್ಟೀಲ್‌ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದಾರೆ.ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ತ್ರಿಶೂಲ್‌ 72 ಅವಕಾಶಗಳನ್ನು ಬಳಸಿಕೊಂಡರು. ಬೆಂಗಳೂರಿನ ಯುವ ಪ್ರತಿಭೆ ಇದೀಗ ಒಟ್ಟು 141 ಸ್ಕೋರ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ.142 ಸ್ಕೋರ್‌ ಹೊಂದಿರುವ ಉದಯನ್‌ ಮಾನೆ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ದಿನ 71 ಅವಕಾಶಗಳನ್ನು ಬಳಸಿಕೊಂಡಿದ್ದ ಮಾನೆ, ಎರಡನೇ ದಿನವೂ ಅಷ್ಟೇ ಅವಕಾಶಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.ಅಮನ್‌ ರಾಜ್‌ (143) ಮೂರನೇ ಸ್ಥಾನದಲ್ಲಿದ್ದರೆ, ಪ್ರತಾಪ್‌ ಅತ್ವಾಲ್‌ ಹಾಗೂ ಮನು ಗಂದಾಸ್‌ (ತಲಾ 146) ಜಂಟಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry