ಮುನ್ನೆಚ್ಚರಿಕೆ ವಹಿಸಿ; ಏಡ್ಸ್ ತಡೆಗಟ್ಟಿ

7

ಮುನ್ನೆಚ್ಚರಿಕೆ ವಹಿಸಿ; ಏಡ್ಸ್ ತಡೆಗಟ್ಟಿ

Published:
Updated:

ಬಂಗಾರಪೇಟೆ: ಏಡ್ಸ್ ಸ್ವಯಾರ್ಜಿತವಾಗಿ ಪಡೆಯುವ ರೋಗ. ಮುಂಜಾಗ್ರತೆ ವಹಿಸಿ ಹರಡದಂತೆ ತಡೆಯಬೇಕು ಎಂದು ತಹಶೀಲ್ದಾರ್ ಎಸ್.ಎಂ.ಮಂಗಳಾ ಅಭಿಪ್ರಾಯಪಟ್ಟರು.ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಆಯೋಜಿಸಿದ್ದ `ವಿಶ್ವ ಏಡ್ಸ್ ದಿನಾಚರಣೆ'ಯಲ್ಲಿ ಮಾತನಾಡಿದ ಅವರು, ಜಾಗೃತಿ ಮೂಡಿಸುತ್ತಿದ್ದರೂ; ಏಡ್ಸ್ ಸೋಂಕಿತರ ಪ್ರಮಾಣ ಏರಿಕೆ ಆಗುತ್ತಿರುವುದು ಆತಂಕಕರ ಎಂದರು.ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿದರು. ಏಡ್ಸ್ ಜಿಲ್ಲಾ ನಿಯಂತ್ರಣ ಅಧಿಕಾರಿ ಡಾ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ, ಎಚ್‌ಆರ್‌ಎಫ್‌ಕೆ ಜಿಲ್ಲಾ ಘಟಕ ಸಂಚಾಲಕ ಹೂವರಸನಹಳ್ಳಿ ರಾಜಪ್ಪ, ಲಯನ್ಸ್ ಕ್ಲಬ್ ಸದಸ್ಯ ನಂದಾ, ಸ್ಪ್ಯಾರ್ಡ್ ಸಂಸ್ಥೆ ಕೋಲಾರಪ್ಪ, ಜಿಲ್ಲಾ ಘಟಕ ಸಂಯೋಜಕ ರಾಘವೇಂದ್ರ, ಪೋಕಸ್ ಟ್ರಸ್ಟ್ ಅಧ್ಯಕ್ಷ ಹರೀಶ್, ಚಂದ್ರಮ್ಮ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry