ಗುರುವಾರ , ಮೇ 26, 2022
31 °C

ಮುನ್ಸೂಚನಾ ವ್ಯವಸ್ಥೆ ಅಳವಡಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಧ್ರಪ್ರದೇಶದ ಪೆನಕೊಂಡ ನಿಲ್ದಾಣದಲ್ಲಿ  ಸಂಭವಿಸಿದ `ಹಂಪಿ ಎಕ್ಸ್‌ಪ್ರೆಸ್~ ರೈಲು ಅಪಘಾತದಲ್ಲಿ 25ಕ್ಕೂ ಹೆಚ್ಚು ಜನ ಬಲಿಯಾದರು. ಗಾಯಾಳುಗಳ ಸಂಖ್ಯೆಯೂ ದೊಡ್ಡದು. ಈ ಘಟನೆಯನ್ನು ಮರೆಯುತ್ತಿದ್ದಂತೆಯೇ ಲಖನೌ ವಿಭಾಗದ ಮಹ್ರಾವ ನಿಲ್ದಾಣದ ಬಳಿ ಮೇ 31 ರಂದು “ಹೌರಾ-ಡೆಹ್ರಾಡೂನ್‌” ಎಕ್ಸ್‌ಪ್ರೆಸ್ ರೈಲಿನ 7 ಬೋಗಿಗಳು ಹಳಿ ತಪ್ಪಿದ್ದರಿಂದ ಐವರು ಸಾವಿಗೀಡಾಗಿದ್ದಾರೆ.ಪದೇ ಪದೇ ರೈಲು ಅಪಘಾತಗಳು ಸಂಭವಿಸುತ್ತಿದ್ದರೂ ರೈಲ್ವೆ ಇಲಾಖೆ ಯೂರೋಪ್ ಮಾದರಿಯ ಅತ್ಯಾಧುನಿಕ ರೈಲು ಸುರಕ್ಷಾ ಹಾಗೂ ಮುನ್ಸೂಚನಾ ವ್ಯವಸ್ಥೆ (ಟಿಪಿಡಬ್ಲುಎಸ್) ಅಳವಡಿಸಲು ಹಿಂದೆಮುಂದೆ ನೋಡುತ್ತಿದೆ.`ಟಿ.ಪಿ.ಡಬ್ಲ್ಯು.ಎಸ್~ ತಂತ್ರಜ್ಞಾನ ಅಳವಡಿಸಿದಾಗ ರೈಲಿನ ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿ ಮುಂದೆ ನಡೆದರೂ ರೈಲಿಗೆ ಸ್ವಯಂ ಚಾಲಿತವಾಗಿ ತುರ್ತು ಬ್ರೇಕ್ ಬೀಳುತ್ತದೆ. ಮುಂದುವರಿದ ದೇಶಗಳಲ್ಲಿ ರೈಲು ಮಾರ್ಗಗಳಲ್ಲಿ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.