ಮುಬಾರಕ್ ಪದತ್ಯಾಗ ಸಂಭವ

7

ಮುಬಾರಕ್ ಪದತ್ಯಾಗ ಸಂಭವ

Published:
Updated:

ಕೈರೊ (ಪಿಟಿಐ): ಈಜಿಪ್ಟ್‌ನ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಗುರುವಾರ ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಪದತ್ಯಾಗ ಮಾಡುವ ಸಂಭವ ಇದೆ ಎಂದು ಉನ್ನತ ಸೇನಾ ಮೂಲಗಳು ತಿಳಿಸಿವೆ.

ರಾಷ್ಟ್ರ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಆರಂಭವಾಗಿದ್ದು, ಜನರ ‘ನ್ಯಾಯಯುತ ಬೇಡಿಕೆ’ಗಳನ್ನು ಈಡೇರಿಸುವುದಾಗಿ ಸೇನಾಪಡೆ ಇದೇ ವೇಳೆ ಹೇಳಿಕೆ ಬಿಡುಗಡೆ ಮಾಡಿರುವುದು ಪದತ್ಯಾಗ ವದಂತಿಗೆ ಪುಷ್ಟಿ ನೀಡಿದೆ.

ಮುಬಾರಕ್ ಅವರು ಉಪಾಧ್ಯಕ್ಷ ಒಮರ್ ಸುಲೇಮಾನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ನಿರೀಕ್ಷೆ ಇದೆ. ಅಧ್ಯಕ್ಷರ 30 ವರ್ಷದ ಆಡಳಿತವನ್ನು ವಿರೋಧಿಸಿ ಭುಗಿಲೆದ್ದಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry