ಮುಬಾರಕ್ ಸಂಪತ್ತು ಗಲ್ಫ್ ರಾಷ್ಟ್ರಗಳತ್ತ ಸ್ಥಳಾಂತರ

7

ಮುಬಾರಕ್ ಸಂಪತ್ತು ಗಲ್ಫ್ ರಾಷ್ಟ್ರಗಳತ್ತ ಸ್ಥಳಾಂತರ

Published:
Updated:

ನ್ಯೂಯಾರ್ಕ್ (ಪಿಟಿಐ): ಪದಚ್ಯುತಗೊಂಡ ಈಜಿಪ್ಟ್‌ನ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರು ಯುರೋಪಿಯನ್ ಬ್ಯಾಂಕ್‌ಗಳಲ್ಲಿ ಇದ್ದ  ತಮ್ಮ ಕುಟುಂಬದ ಚರಾಸ್ತಿಗಳನ್ನು ಗಲ್ಫ್ ರಾಷ್ಟ್ರಗಳ ಸಂಸ್ಥೆಗಳಿಗೆ ವರ್ಗಾಯಿಸಿದ್ದಾರೆ.ಮುಬಾರಕ್ ಪದಚ್ಯುತಗೊಳ್ಳುತ್ತಿದ್ದಂತೆ  ಸ್ವಿಸ್ ಬ್ಯಾಂಕ್ ಪ್ರಾಧಿಕಾರವು ಯುರೋಪಿಯನ್ ಬ್ಯಾಂಕ್‌ಗಳಲ್ಲಿದ್ದ ಮುಬಾರಕ್ ಅವರ ಖಾತೆಗಳನ್ನು ಮುಟ್ಟುಗೊಲು ಹಾಕಿಕೊಳ್ಳಲು ಕ್ರಮಗೊಳ್ಳುವಂತೆ ಸೂಚಿಸಿತ್ತು. ಇದನ್ನರಿತ ಮುಬಾರಕ್ ಅವರು ತಮ್ಮ ಖಾತೆಗಳಲ್ಲಿದ್ದ ಸಂಪತ್ತಿನ ಸ್ಥಳ ಬದಲಾಯಿಸಿದ್ದಾರೆ.‘ತಮ್ಮ ಕುಟುಂಬದ ಚರಾಸ್ತಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಕುಟುಂಬದೊಳಗೆ ನಡೆದ ತರ್ತು ಸಮಾಲೋಚನೆಯ ವಿಷಯ ನಮಗೆ ತಿಳಿದಿದೆ. ನಮ್ಮ ಅಂದಾಜಿನ ಪ್ರಕಾರ ಮುಬಾರಕ್ ಅವರ ಆರ್ಥಿಕ ಸಲಹೆಗಾರರು ಕೆಲ ಪ್ರಮಾಣದ ಹಣವನ್ನು ವರ್ಗಾಯಿಸಿದ್ದಾರೆ. ಒಂದೊಮ್ಮೆ ಜ್ಯೂರಿಚ್‌ನಲ್ಲಿ ಹಣವಿದ್ದರೆ ಅದು ಈ ವೇಳೆಗಾಗಲೇ ವರ್ಗಾವಣೆ ಆಗಿರುತ್ತದೆ’ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇರಾನ್‌ನ ಸರ್ಕಾರಿ ಟಿವಿ ವಾಹಿನಿ ವರದಿ ಮಾಡಿದೆ.ಮುಬಾರಕ್ ಅವರು ಮಿತ್ರ ರಾಷ್ಟ್ರಗಳಾದ ಅರಬ್,ಯುನೈಟೆಡ್ ಅರಬ್ ಎಮಿರೆಟ್ ಸೇರಿದಂತೆ ಸೌದಿ ಅರೇಬಿಯಾ ರಾಷ್ಟ್ರಗಳತ್ತ ತಮ್ಮ ಸಂಪತ್ತನ್ನು ಸ್ಥಳಾಂತರಿಸ್ಗಹುದೆಂದು ನಂಬಲಾಗಿದೆ. ಒಂದು ಮೂಲದ ಪ್ರಕಾರ ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಯೂರೋಪಿಯನ್ ಬ್ಯಾಂಕ್‌ಗಳಲ್ಲಿ ಸುಮಾರು 70 ಶತಕೋಟಿ ಅಮೆರಿಕನ್ ಡಾಲರ್ ಇಟ್ಟಿದ್ದರು ಎಂದು ಅಂದಾಜು ಮಾಡಲಾಗಿದೆ. ಜತೆಗೆ ಅವರ ಕುಟುಂಬದ ಆಸ್ತಿಯ ಮೊತ್ತ 2-3 ಶತಕೋಟಿ ಅಮೆರಿಕನ್ ಡಾಲರ್ ಇರ್ಗಹುದು ಎಂದು ಅಮೆರಿಕದ ಅಧಿಕಾರಿಗಳು ಅಂದಾಜು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮುಬಾರಕ್ ಗುಪ್ತ ಆಸ್ತಿಗಳು: ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ, ಸ್ವಿಟ್ಜರ್ಲೆಂಡ್ ಸರ್ಕಾರ ದೇಶದಲ್ಲಿರುವ ಅವರ ಆಸ್ತಿಗಳನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿತ್ತು. ಜತೆಗೆ ಈಜಿಪ್ಟ್‌ನ ವಿರೋಧಪಕ್ಷದ ನಾಯಕರೂ ಸಹ ಮುಬಾರಕ್ ಅವರ ಆಸ್ತಿ ಕುರಿತು ತನಿಖೆ ನಡೆಸಲು ಆಗ್ರಹಿಸಿದ್ದರು.ಮುಬಾರಕ್ ಅವರ ಒಟ್ಟು ಆಸ್ತಿಯನ್ನು ಪತ್ತೆ ಹಚ್ಚುವುದು ಸುಲಭದ ಮಾತಲ್ಲ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಈಜಿಪ್ಟ್‌ನ ಬಹುಪಾಲು ವ್ಯವಹಾರ ಸಣ್ಣ ಸಮೂಹ ಸಂಸ್ಥೆಗಳೊಂದಿಗಿದ್ದು, ಅವು ಗುಪ್ತ ಒಪ್ಪಂದದ ಮೂಲಕ ನಡೆಯುತ್ತಿರುವುದೇ ಇದಕ್ಕೆ ಕಾರಣ.1990ರಲ್ಲಿ ಈಜಿಪ್ಟ್‌ನ ಆರ್ಥಿಕ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿತ್ತು. ಹೀಗಾಗಿ ದೇಶದ ಆಸ್ತಿಗಳಲ್ಲಿ ಹಾಗೂ ಹೊಸದಾಗಿ ಆರಂಭವಾಗುವ ವ್ಯಾವಹಾರಿಕ ಸಂಸ್ಥೆಗಳಲ್ಲಿ ಸಹಜವಾಗಿ ಮುಬಾರಕ್ ಕುಟುಂಬದ ಪಾಲು ಇತ್ತು ಎಂದು ಹೇಳಲಾಗುತ್ತಿದೆ.ಈ ನಡುವೆ ಮುಬಾರಕ್ ಅವರ ಕೊನೆಯ ಮಗ ಗಮಾಲ್ ಲಂಡನ್‌ನಲ್ಲಿರುವ ಅಮೆರಿಕ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. 1990ರ ವೇಳೆಗೆ ಸ್ವದೇಶಕ್ಕೆ ಮರಳಿ ಈಜಿಪ್ಟ್‌ನ ಅತಿ ದೊಡ್ಡ ಹೂಡಿಕೆ ಬ್ಯಾಂಕ್‌ಗೆ ಸೇರಿಕೊಂಡರು. ಇಂದು ಈಜಿಪ್ಟ್‌ನ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪಾಲುಗಳನ್ನು ಹೊಂದಿದ್ದಾರೆ.ಜತೆಗೆ ತೈಲ, ಕೃಷಿ, ಪ್ರವಾಸೋಧ್ಯಮ, ಕಾರ್ಪೊರೇಟ್ ವಲಯ ಹೀಗೆ ಪ್ರತಿಯೊಂದು ಕ್ಷೇತ್ರದಿಂದಲೂ ಬರುವ ಅಪಾರ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಜತಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಮುಬಾರಕ್ ಕುಟುಂಬ ಸಕ್ರೀಯವಾಗಿತ್ತು ಎಂದೂ ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry