ಮಂಗಳವಾರ, ಏಪ್ರಿಲ್ 13, 2021
32 °C
ಮತ್ತೆ ಸುಪ್ರೀಂ ಅಂಗಳಕ್ಕೆ: ತಮಿಳುನಾಡು ನಿರ್ಧಾರ

ಮುರಿದುಬಿದ್ದ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವೇರಿ ನದಿ ನೀರು ವಿವಾದ ಪರಿಹಾರಕ್ಕೆ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ನಡುವೆ 14 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆದ 50 ನಿಮಿಷಗಳ ಮಹತ್ವದ ಮಾತುಕತೆ ಮುರಿದುಬಿದ್ದಿದೆ. ವಿವಾದವನ್ನು ಪುನಃ ಸುಪ್ರೀಂ ಕೋರ್ಟ್ ಅಂಗಳಕ್ಕೆ ಒಯ್ಯುವುದಾಗಿ ತಮಿಳುನಾಡು ತಿಳಿಸಿದೆ.

ಸುಪ್ರೀಂ ಕೋರ್ಟ್ ಸಲಹೆಯಂತೆ ಗುರುವಾರ ನಡೆದ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು `14.93 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಸಾಂಬಾ ಬೆಳೆಗೆ ಹದಿನೈದು ದಿನಗಳಲ್ಲಿ 30 ಟಿಎಂಸಿ ಅಡಿ ನೀರು ಬಿಡಬೇಕು' ಎಂದು ಪಟ್ಟು ಹಿಡಿದರು.

`ಮಳೆ ಕೊರತೆಯಿಂದ ಕರ್ನಾಟಕದ ರೈತರೇ ಕಡುಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟ' ಎಂದು  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮಿಳುನಾಡು ಬೇಡಿಕೆ ತಿರಸ್ಕರಿಸಿದರು. ಇದರಿಂದ ಅಸಮಾಧಾನಗೊಂಡ ಜಯಲಲಿತಾ ಸಭೆಯಿಂದ ನಿರ್ಗಮಿಸಿದರು.

ನಿಗದಿಯಂತೆ ಮಧ್ಯಾಹ್ನ 3ಕ್ಕೆ ಲೀಲಾ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಸಭೆ ಶುರುವಾಯಿತು. 3.50ಕ್ಕೆ ಸಭಾಂಗಣದಿಂದ ಹೊರಬಂದ ಜಯಲಲಿತಾ, `ಕರ್ನಾಟಕ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ. ಕರ್ನಾಟಕದ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುತ್ತೇವೆ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಕೋರ್ಟ್ ಸಲಹೆಯಂತೆ ಈ ಮಾತುಕತೆ ನಡೆಯಿತು. ತಮಿಳುನಾಡು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇವೆ. ಕುರುವೈ ಬೆಳೆ ಕಳೆದುಕೊಂಡ ರೈತರಿಗೆ ಸಾಂಬಾ ಬೆಳೆಯಾದರೂ ಕೈಗೆ ಸಿಗಲಿ ಎನ್ನುವುದು ನಮ್ಮ ಕಾಳಜಿ. ಈ ಕಾರಣಕ್ಕೇ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡಬೇಕು. 65 ದಿನ ನೀರು ಕೊಟ್ಟು ಬೆಳೆ ಉಳಿಸದಿದ್ದರೆ ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪ ಸೃಷ್ಟಿಯಾಗಲಿದೆ ಎಂಬುದನ್ನೂ ವಿವರಿಸಿದ್ದೇವೆ' ಎಂದರು.

`ಮೆಟ್ಟೂರು ಜಲಾಶಯದಲ್ಲಿ 16 ಟಿಎಂಸಿ ಅಡಿ ನೀರು ಇದ್ದರೂ ಅದರಲ್ಲಿ ಕೃಷಿಗೆ ಬಳಸಲು ಲಭ್ಯವಿರುವುದು ಕೇವಲ 6.32 ಟಿಎಂಸಿ ಅಡಿ. 5 ಟಿಎಂಸಿ ಅಡಿ ನೀರು ಕುಡಿಯುವುದಕ್ಕೆ ಬಳಸಿದರೆ, ಇನ್ನುಳಿದ 5 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ (ಬಳಸಲು ಸಾಧ್ಯವಾಗದ ನೀರು). ಲಭ್ಯ ಇರುವ ನೀರನ್ನು ಆರು ದಿನ ಮಾತ್ರ ಕೃಷಿಗೆ ಬಳಸಬಹುದಾಗಿದೆ. ಹೀಗಾಗಿ ತಕ್ಷಣ ನೀರು ಬಿಡಬೇಕು ಎಂಬುದು ನಮ್ಮ ಮನವಿ' ಎಂದರು.

`ಆದರೆ, ಕರ್ನಾಟಕದ ಮುಖ್ಯಮಂತ್ರಿಗಳು ಒಂದೇ ಒಂದು ಹನಿ ನೀರು ಬಿಡುವುದಕ್ಕೂ ಸಾಧ್ಯ ಇಲ್ಲ ಎಂದಿದ್ದಾರೆ. ಎಷ್ಟೇ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ಹೀಗಾಗಿ ಸಭೆಯಲ್ಲಿ ಇದ್ದು ಏನು ಮಾಡಲಿ ಎಂದು ಎದ್ದು ಹೊರಬಂದೆ' ಎಂದು ಜಯಲಲಿತಾ ಅವರು ಹೋಟೆಲ್‌ನ ಹೊರಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು  (ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಕಾರಿಗೆ ಅಳವಡಿಸಿರುವ ಮೈಕ್ ಮೂಲಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು).

ಕರ್ನಾಟಕದ ಕಷ್ಟ: ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜಂಟಿ ಪತ್ರಿಕಾಗೋಷ್ಠಿಗೆ ಸಿದ್ಧತೆ ಮಾಡಲಾಗಿತ್ತು. ಆದರೆ, ಜಯಲಲಿತಾ ಅವರು ಅನಿರೀಕ್ಷಿತ ಎಂಬಂತೆ ಸಭೆಯಿಂದ ಹೊರಬಂದ ಕಾರಣಕ್ಕೆ ಅದು ಕೈಗೂಡಲಿಲ್ಲ. ಅವರು ಹೊರ ಹೋದ ಬಳಿಕ ಶೆಟ್ಟರ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

`ಕಾವೇರಿ ಜಲಾನಯನ ಪ್ರದೇಶದ ಅಷ್ಟೂ ಜಲಾಶಯಗಳಲ್ಲಿ ಇರುವುದೇ 37 ಟಿಎಂಸಿ ಅಡಿ ನೀರು. ಅದರಲ್ಲಿ 30 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೇ ಹರಿದುಬಿಟ್ಟರೆ ರಾಜ್ಯದ ಜನರ ಗತಿ ಏನು. ಹೀಗಾಗಿ ನೀರು ಬಿಡಲು ಸಾಧ್ಯ ಇಲ್ಲ ಎಂದು ಅವರ ಗಮನಕ್ಕೆ ತರಲಾಯಿತು. ಬೇಕಿದ್ದರೆ ಎರಡೂ ರಾಜ್ಯಗಳಲ್ಲಿನ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿಸೋಣ ಎನ್ನುವ ಬೇಡಿಕೆಯನ್ನೂ ಅವರ ಮುಂದೆ ಇಟ್ಟೆ. ಆದರೆ, ಯಾವುದಕ್ಕೂ ಅವರು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ' ಎಂದು ಶೆಟ್ಟರ್ ಹೇಳಿದರು.

`ಲಭ್ಯ ಇರುವ 37 ಟಿಎಂಸಿ ಅಡಿ ನೀರಿನಲ್ಲಿ 20 ಟಿಎಂಸಿ ಅಡಿ ನೀರು ಬೆಂಗಳೂರು ನಗರ ಹಾಗೂ ಕಾವೇರಿ ಜಲಾನಯನ ಪ್ರದೇಶಗಳ ಜನರಿಗೆ ಕುಡಿಯಲು ಬೇಕಾಗುತ್ತದೆ. 10 ಟಿಎಂಸಿ ಅಡಿ ನೀರು ನೈಸರ್ಗಿಕವಾಗಿ ನದಿಯಲ್ಲಿ ಹರಿಯಲು ಬಿಡಬೇಕಾಗುತ್ತದೆ. ಇನ್ನು ಕೃಷಿ ಸಲುವಾಗಿ ಉಳಿಯುವುದು ಕೇವಲ ಏಳು ಟಿಎಂಸಿ ಅಡಿ. ಆ ನೀರು ಈಗಿರುವ ಬೆಳೆಗೇ ಸಾಕಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀರು ಬಿಡುವುದು ಹೇಗೆ' ಎಂದು ಅವರು ಪ್ರಶ್ನಿಸಿದರು.

`ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆದ ಸಂದರ್ಭದಲ್ಲಿ 57 ಟಿಎಂಸಿ ಅಡಿ ನೀರು ಲಭ್ಯ ಇತ್ತು. ಆದರೆ, ಈಗ ಅದು 37 ಟಿಎಂಸಿ ಅಡಿಗೆ ಇಳಿದಿದೆ. ಪರಿಸ್ಥಿತಿ ಕ್ಲಿಷ್ಟವಾಗಿದೆ. ಹೀಗಾಗಿ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆ ಹೋದರೆ ನಾವು ಕೂಡ ರಾಜ್ಯದ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ವಿವರಿಸುತ್ತೇವೆ' ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಎಸ್.ಸುರೇಶಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಅವರು ರಾಜ್ಯದ ಪರ ಸಭೆಯಲ್ಲಿ ಹಾಜರಿದ್ದರು.

ತಮಿಳುನಾಡು ಪರ ಅಲ್ಲಿನ ಲೋಕೋಪಯೋಗಿ ಸಚಿವ ಕೆ.ವಿ.ರಾಮಲಿಂಗಮ್, ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಾರಂಗಿ ಮತ್ತಿತರರು ಭಾಗವಹಿಸಿದ್ದರು.

`ಕುರುವೈ ಬೆಳೆ ಕೈ ಹಿಡಿದಿದೆ'

ನೀರಿನ ಕೊರತೆಯಿಂದ ಕುರುವೈ ಬೆಳೆ ಹಾಳಾಗಿದೆ. ಸಾಂಬಾ ಬೆಳೆಗೆ ಮೆಟ್ಟೂರು ಡ್ಯಾಂನಲ್ಲಿ ಕೇವಲ 6.32 ಟಿಎಂಸಿ ಅಡಿ ನೀರು ಇದೆ ಎನ್ನುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಾದವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ.

`ಕೇಂದ್ರ ಜಲ ಆಯೋಗದ ಅಂಕಿ-ಸಂಖ್ಯೆ ಪ್ರಕಾರವೇ ಕುರುವೈ ಬೆಳೆಗೆ ಕಾವೇರಿಯಿಂದ 14 ಟಿಎಂಸಿ ಅಡಿ ನೀರು ಹರಿದಿದೆ. ಜತೆಗೆ ಅಂತರ್ಜಲ ಕೂಡ ಬಳಸಲಾಗಿದೆ. ಇದರಿಂದಾಗಿ ಶೇ 60ಕ್ಕಿಂತ ಹೆಚ್ಚು ಫಸಲು ರೈತರಿಗೆ ಸಿಕ್ಕಿದೆ. ನೀರಿಲ್ಲದೆ ಹಾಳಾಗಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರ' ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

`ಮೆಟ್ಟೂರಿನಲ್ಲಿ ಒಟ್ಟು 16 ಟಿಎಂಸಿ ಅಡಿ ನೀರು ಇದ್ದು, ಅಷ್ಟೂ ನೀರನ್ನು ಕೃಷಿಗೆ ಬಳಸಬಹುದಾಗಿದೆ. ಹಿಂದೆ ಡೆಡ್ ಸ್ಟೋರೇಜನ್ನೂ ಬಳಸಿದ ನಿದರ್ಶನಗಳಿವೆ. ಹೀಗಾಗಿ ಅದನ್ನು ಬಳಸಲು ಸಾಧ್ಯ ಇಲ್ಲ ಎಂದು  ಹೇಳುತ್ತಿರುವುದು ಸರಿಯಲ್ಲ' ಎಂದೂ ಅವರುಆಕ್ಷೇಪಿಸಿದರು.

`ಹನಿ ನೀರು ಕೊಡೋದಿಲ್ಲ ಎಂದು ಹೇಳಿಲ್ಲ'

ಹನಿ ನೀರು ಕೂಡ ಬಿಡುವುದಿಲ್ಲ ಎಂದು ನಾನು ಹೇಳಿಲ್ಲ. ಬದಲಿಗೆ ರಾಜ್ಯದ ಪರಿಸ್ಥಿತಿಯನ್ನು ಅವರ ಮುಂದಿಟ್ಟೆ. ದೀರ್ಘಾವಧಿ ಯೋಜನೆಗಳ ಬಗ್ಗೆಯೂ ವಿವರಿಸಿದೆ' ಎಂದು ಶೆಟ್ಟರ್ ಹೇಳಿದರು.`ಜಯಲಲಿತಾ ಸುದ್ದಿಗಾರರಿಗೆ ತಿಳಿಸಿರುವಂತೆ ಹನಿ ನೀರು ಕೂಡ ಬಿಡುವುದಿಲ್ಲ ಎಂದು ನಾವು ಯಾವುದೇ ಸಂದರ್ಭದಲ್ಲಿ ಹೇಳಿಲ್ಲ. ನೀರು ಇದ್ದರೆ ಕೊಡಲು ಸಮಸ್ಯೆ ಇಲ್ಲ. ಇಲ್ಲದ ನೀರು ಕೇಳುವುದಕ್ಕಿಂತ ಬೇರೆ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಮುಕ್ತ ಎಂದು ಹೇಳಿದ್ದೇನೆ.ಚೆನ್ನೈಗೂ ಮಾತುಕತೆಗೆ ಬರುವುದಾಗಿ ಹೇಳಿದ್ದೇವೆ. ಅದಕ್ಕೆ ಅವರು, ಚೆನ್ನೈಗೆ ಬೇಕಾದರೆ ಬನ್ನಿ. ಆದರೆ, ನೀರಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಮೊರೆ ಹೋಗುವುದಂತೂ ಖಚಿತ ಎಂಬುದನ್ನು ಹೇಳಿದರು. ನಾವು ಕೂಡ ಅದೇ ದಾರಿ ಹಿಡಿಯಬೇಕಾಗುತ್ತದೆ' ಎಂದು ಶೆಟ್ಟರ್ ತಿಳಿಸಿದರು.ಬೆಂಗಳೂರು: ಕಾವೇರಿ ನದಿ ನೀರು ವಿವಾದ ಪರಿಹಾರಕ್ಕೆ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ನಡುವೆ 14 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆದ 50 ನಿಮಿಷಗಳ ಮಹತ್ವದ ಮಾತುಕತೆ ಮುರಿದುಬಿದ್ದಿದೆ. ವಿವಾದವನ್ನು ಪುನಃ ಸುಪ್ರೀಂ ಕೋರ್ಟ್ ಅಂಗಳಕ್ಕೆ ಒಯ್ಯುವುದಾಗಿ ತಮಿಳುನಾಡು ತಿಳಿಸಿದೆ.

ಸುಪ್ರೀಂ ಕೋರ್ಟ್ ಸಲಹೆಯಂತೆ ಗುರುವಾರ ನಡೆದ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು `14.93 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಸಾಂಬಾ ಬೆಳೆಗೆ ಹದಿನೈದು ದಿನಗಳಲ್ಲಿ 30 ಟಿಎಂಸಿ ಅಡಿ ನೀರು ಬಿಡಬೇಕು' ಎಂದು ಪಟ್ಟು ಹಿಡಿದರು.

`ಮಳೆ ಕೊರತೆಯಿಂದ ಕರ್ನಾಟಕದ ರೈತರೇ ಕಡುಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟ' ಎಂದು  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮಿಳುನಾಡು ಬೇಡಿಕೆ ತಿರಸ್ಕರಿಸಿದರು. ಇದರಿಂದ ಅಸಮಾಧಾನಗೊಂಡ ಜಯಲಲಿತಾ ಸಭೆಯಿಂದ ನಿರ್ಗಮಿಸಿದರು.

ನಿಗದಿಯಂತೆ ಮಧ್ಯಾಹ್ನ 3ಕ್ಕೆ ಲೀಲಾ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಸಭೆ ಶುರುವಾಯಿತು. 3.50ಕ್ಕೆ ಸಭಾಂಗಣದಿಂದ ಹೊರಬಂದ ಜಯಲಲಿತಾ, `ಕರ್ನಾಟಕ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ. ಕರ್ನಾಟಕದ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುತ್ತೇವೆ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ಕೋರ್ಟ್ ಸಲಹೆಯಂತೆ ಈ ಮಾತುಕತೆ ನಡೆಯಿತು. ತಮಿಳುನಾಡು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇವೆ. ಕುರುವೈ ಬೆಳೆ ಕಳೆದುಕೊಂಡ ರೈತರಿಗೆ ಸಾಂಬಾ ಬೆಳೆಯಾದರೂ ಕೈಗೆ ಸಿಗಲಿ ಎನ್ನುವುದು ನಮ್ಮ ಕಾಳಜಿ. ಈ ಕಾರಣಕ್ಕೇ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡಬೇಕು. 65 ದಿನ ನೀರು ಕೊಟ್ಟು ಬೆಳೆ ಉಳಿಸದಿದ್ದರೆ ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪ ಸೃಷ್ಟಿಯಾಗಲಿದೆ ಎಂಬುದನ್ನೂ ವಿವರಿಸಿದ್ದೇವೆ' ಎಂದರು.

`ಮೆಟ್ಟೂರು ಜಲಾಶಯದಲ್ಲಿ 16 ಟಿಎಂಸಿ ಅಡಿ ನೀರು ಇದ್ದರೂ ಅದರಲ್ಲಿ ಕೃಷಿಗೆ ಬಳಸಲು ಲಭ್ಯವಿರುವುದು ಕೇವಲ 6.32 ಟಿಎಂಸಿ ಅಡಿ. 5 ಟಿಎಂಸಿ ಅಡಿ ನೀರು ಕುಡಿಯುವುದಕ್ಕೆ ಬಳಸಿದರೆ, ಇನ್ನುಳಿದ 5 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ (ಬಳಸಲು ಸಾಧ್ಯವಾಗದ ನೀರು). ಲಭ್ಯ ಇರುವ ನೀರನ್ನು ಆರು ದಿನ ಮಾತ್ರ ಕೃಷಿಗೆ ಬಳಸಬಹುದಾಗಿದೆ. ಹೀಗಾಗಿ ತಕ್ಷಣ ನೀರು ಬಿಡಬೇಕು ಎಂಬುದು ನಮ್ಮ ಮನವಿ' ಎಂದರು.

`ಆದರೆ, ಕರ್ನಾಟಕದ ಮುಖ್ಯಮಂತ್ರಿಗಳು ಒಂದೇ ಒಂದು ಹನಿ ನೀರು ಬಿಡುವುದಕ್ಕೂ ಸಾಧ್ಯ ಇಲ್ಲ ಎಂದಿದ್ದಾರೆ. ಎಷ್ಟೇ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ಹೀಗಾಗಿ ಸಭೆಯಲ್ಲಿ ಇದ್ದು ಏನು ಮಾಡಲಿ ಎಂದು ಎದ್ದು ಹೊರಬಂದೆ' ಎಂದು ಜಯಲಲಿತಾ ಅವರು ಹೋಟೆಲ್‌ನ ಹೊರಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು  (ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಕಾರಿಗೆ ಅಳವಡಿಸಿರುವ ಮೈಕ್ ಮೂಲಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು).

ಕರ್ನಾಟಕದ ಕಷ್ಟ: ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜಂಟಿ ಪತ್ರಿಕಾಗೋಷ್ಠಿಗೆ ಸಿದ್ಧತೆ ಮಾಡಲಾಗಿತ್ತು. ಆದರೆ, ಜಯಲಲಿತಾ ಅವರು ಅನಿರೀಕ್ಷಿತ ಎಂಬಂತೆ ಸಭೆಯಿಂದ ಹೊರಬಂದ ಕಾರಣಕ್ಕೆ ಅದು ಕೈಗೂಡಲಿಲ್ಲ. ಅವರು ಹೊರ ಹೋದ ಬಳಿಕ ಶೆಟ್ಟರ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

`ಕಾವೇರಿ ಜಲಾನಯನ ಪ್ರದೇಶದ ಅಷ್ಟೂ ಜಲಾಶಯಗಳಲ್ಲಿ ಇರುವುದೇ 37 ಟಿಎಂಸಿ ಅಡಿ ನೀರು. ಅದರಲ್ಲಿ 30 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೇ ಹರಿದುಬಿಟ್ಟರೆ ರಾಜ್ಯದ ಜನರ ಗತಿ ಏನು. ಹೀಗಾಗಿ ನೀರು ಬಿಡಲು ಸಾಧ್ಯ ಇಲ್ಲ ಎಂದು ಅವರ ಗಮನಕ್ಕೆ ತರಲಾಯಿತು. ಬೇಕಿದ್ದರೆ ಎರಡೂ ರಾಜ್ಯಗಳಲ್ಲಿನ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿಸೋಣ ಎನ್ನುವ ಬೇಡಿಕೆಯನ್ನೂ ಅವರ ಮುಂದೆ ಇಟ್ಟೆ. ಆದರೆ, ಯಾವುದಕ್ಕೂ ಅವರು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ' ಎಂದು ಶೆಟ್ಟರ್ ಹೇಳಿದರು.

`ಲಭ್ಯ ಇರುವ 37 ಟಿಎಂಸಿ ಅಡಿ ನೀರಿನಲ್ಲಿ 20 ಟಿಎಂಸಿ ಅಡಿ ನೀರು ಬೆಂಗಳೂರು ನಗರ ಹಾಗೂ ಕಾವೇರಿ ಜಲಾನಯನ ಪ್ರದೇಶಗಳ ಜನರಿಗೆ ಕುಡಿಯಲು ಬೇಕಾಗುತ್ತದೆ. 10 ಟಿಎಂಸಿ ಅಡಿ ನೀರು ನೈಸರ್ಗಿಕವಾಗಿ ನದಿಯಲ್ಲಿ ಹರಿಯಲು ಬಿಡಬೇಕಾಗುತ್ತದೆ. ಇನ್ನು ಕೃಷಿ ಸಲುವಾಗಿ ಉಳಿಯುವುದು ಕೇವಲ ಏಳು ಟಿಎಂಸಿ ಅಡಿ. ಆ ನೀರು ಈಗಿರುವ ಬೆಳೆಗೇ ಸಾಕಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀರು ಬಿಡುವುದು ಹೇಗೆ' ಎಂದು ಅವರು ಪ್ರಶ್ನಿಸಿದರು.

`ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆದ ಸಂದರ್ಭದಲ್ಲಿ 57 ಟಿಎಂಸಿ ಅಡಿ ನೀರು ಲಭ್ಯ ಇತ್ತು. ಆದರೆ, ಈಗ ಅದು 37 ಟಿಎಂಸಿ ಅಡಿಗೆ ಇಳಿದಿದೆ. ಪರಿಸ್ಥಿತಿ ಕ್ಲಿಷ್ಟವಾಗಿದೆ. ಹೀಗಾಗಿ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆ ಹೋದರೆ ನಾವು ಕೂಡ ರಾಜ್ಯದ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ವಿವರಿಸುತ್ತೇವೆ' ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಎಸ್.ಸುರೇಶಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಅವರು ರಾಜ್ಯದ ಪರ ಸಭೆಯಲ್ಲಿ ಹಾಜರಿದ್ದರು.

ತಮಿಳುನಾಡು ಪರ ಅಲ್ಲಿನ ಲೋಕೋಪಯೋಗಿ ಸಚಿವ ಕೆ.ವಿ.ರಾಮಲಿಂಗಮ್, ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಾರಂಗಿ ಮತ್ತಿತರರು ಭಾಗವಹಿಸಿದ್ದರು.

`ಕುರುವೈ ಬೆಳೆ ಕೈ ಹಿಡಿದಿದೆ'

ನೀರಿನ ಕೊರತೆಯಿಂದ ಕುರುವೈ ಬೆಳೆ ಹಾಳಾಗಿದೆ. ಸಾಂಬಾ ಬೆಳೆಗೆ ಮೆಟ್ಟೂರು ಡ್ಯಾಂನಲ್ಲಿ ಕೇವಲ 6.32 ಟಿಎಂಸಿ ಅಡಿ ನೀರು ಇದೆ ಎನ್ನುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಾದವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ.

`ಕೇಂದ್ರ ಜಲ ಆಯೋಗದ ಅಂಕಿ-ಸಂಖ್ಯೆ ಪ್ರಕಾರವೇ ಕುರುವೈ ಬೆಳೆಗೆ ಕಾವೇರಿಯಿಂದ 14 ಟಿಎಂಸಿ ಅಡಿ ನೀರು ಹರಿದಿದೆ. ಜತೆಗೆ ಅಂತರ್ಜಲ ಕೂಡ ಬಳಸಲಾಗಿದೆ. ಇದರಿಂದಾಗಿ ಶೇ 60ಕ್ಕಿಂತ ಹೆಚ್ಚು ಫಸಲು ರೈತರಿಗೆ ಸಿಕ್ಕಿದೆ. ನೀರಿಲ್ಲದೆ ಹಾಳಾಗಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರ' ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

`ಮೆಟ್ಟೂರಿನಲ್ಲಿ ಒಟ್ಟು 16 ಟಿಎಂಸಿ ಅಡಿ ನೀರು ಇದ್ದು, ಅಷ್ಟೂ ನೀರನ್ನು ಕೃಷಿಗೆ ಬಳಸಬಹುದಾಗಿದೆ. ಹಿಂದೆ ಡೆಡ್ ಸ್ಟೋರೇಜನ್ನೂ ಬಳಸಿದ ನಿದರ್ಶನಗಳಿವೆ. ಹೀಗಾಗಿ ಅದನ್ನು ಬಳಸಲು ಸಾಧ್ಯ ಇಲ್ಲ ಎಂದು  ಹೇಳುತ್ತಿರುವುದು ಸರಿಯಲ್ಲ' ಎಂದೂ ಅವರುಆಕ್ಷೇಪಿಸಿದರು.

`ಹನಿ ನೀರು ಕೊಡೋದಿಲ್ಲ ಎಂದು ಹೇಳಿಲ್ಲ'

ಹನಿ ನೀರು ಕೂಡ ಬಿಡುವುದಿಲ್ಲ ಎಂದು ನಾನು ಹೇಳಿಲ್ಲ. ಬದಲಿಗೆ ರಾಜ್ಯದ ಪರಿಸ್ಥಿತಿಯನ್ನು ಅವರ ಮುಂದಿಟ್ಟೆ. ದೀರ್ಘಾವಧಿ ಯೋಜನೆಗಳ ಬಗ್ಗೆಯೂ ವಿವರಿಸಿದೆ' ಎಂದು ಶೆಟ್ಟರ್ ಹೇಳಿದರು.`ಜಯಲಲಿತಾ ಸುದ್ದಿಗಾರರಿಗೆ ತಿಳಿಸಿರುವಂತೆ ಹನಿ ನೀರು ಕೂಡ ಬಿಡುವುದಿಲ್ಲ ಎಂದು ನಾವು ಯಾವುದೇ ಸಂದರ್ಭದಲ್ಲಿ ಹೇಳಿಲ್ಲ. ನೀರು ಇದ್ದರೆ ಕೊಡಲು ಸಮಸ್ಯೆ ಇಲ್ಲ. ಇಲ್ಲದ ನೀರು ಕೇಳುವುದಕ್ಕಿಂತ ಬೇರೆ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಮುಕ್ತ ಎಂದು ಹೇಳಿದ್ದೇನೆ.ಚೆನ್ನೈಗೂ ಮಾತುಕತೆಗೆ ಬರುವುದಾಗಿ ಹೇಳಿದ್ದೇವೆ. ಅದಕ್ಕೆ ಅವರು, ಚೆನ್ನೈಗೆ ಬೇಕಾದರೆ ಬನ್ನಿ. ಆದರೆ, ನೀರಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಮೊರೆ ಹೋಗುವುದಂತೂ ಖಚಿತ ಎಂಬುದನ್ನು ಹೇಳಿದರು. ನಾವು ಕೂಡ ಅದೇ ದಾರಿ ಹಿಡಿಯಬೇಕಾಗುತ್ತದೆ' ಎಂದು ಶೆಟ್ಟರ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.