ಮುರಿದು ಬಿದ್ದ ರಥ: ಐವರ ಸಾವು

7

ಮುರಿದು ಬಿದ್ದ ರಥ: ಐವರ ಸಾವು

Published:
Updated:

ಚೆನ್ನೈ: ತಿರುವಣ್ಣಾಮಲೈ ಜಿಲ್ಲೆಯ ಅರ‌್ಣಿಯಲ್ಲಿನ ಕೈಲಾಸನಾಥ ಸ್ವಾಮಿ ರಥ ಮುರಿದು ಬಿದ್ದ ಕಾರಣ ಕನಿಷ್ಠ ಐವರು ಸಾವನ್ನಪ್ಪಿ, ಎಂಟು ಜನರು ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.ಮರದಿಂದ ಕಟ್ಟಲಾಗಿದ್ದ 35 ಅಡಿ ಎತ್ತರದ ತೇರನ್ನು ಭಕ್ತರು ಜಯಘೋಷದಿಂದೊಗೆ ಎಳೆಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ತೇರಿನ ಮೇಲ್ಭಾಗ ಭಕ್ತ ಸಮೂಹದ ಮೇಲೆ ಮುರಿದು ಬಿತ್ತು ಮತ್ತು ತೇರು ಒಂದು ಕಡೆಗೆ ಕುಸಿಯಿತು. ಇದರಿಂದ ಸ್ಥಳದಲ್ಲೇ ಐವರು ಅಸುನೀಗಿದ್ದು, ತೀವ್ರವಾಗಿ ಗಾಯಗೊಂಡಿರುವ ನಾಲ್ವರನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿರುವಣ್ಣಾಮಲೈ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry