ಭಾನುವಾರ, ಏಪ್ರಿಲ್ 11, 2021
22 °C

ಮುರುಗನ್ ಪತ್ನಿ ವಿರುದ್ಧ ಎಫ್‌ಐಆರ್ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಕ್ರಮ ನಾಟಾ ಸಂಗ್ರಹಣೆ ಹಿನ್ನೆಲೆಯಲ್ಲಿ ಸಿಐಡಿ ಡಿಐಜಿ  ಎಸ್. ಮುರುಗನ್ ಅವರ ಪತ್ನಿ ಶುಭಾ ಮುರುಗನ್ ವಿರುದ್ಧ ಅರಣ್ಯ ಇಲಾಖೆ ಶುಕ್ರವಾರ ಎಫ್‌ಐಆರ್ ದಾಖಲಿಸಿದೆ.ಶುಭಾ ಮುರುಗನ್ ಅವರ ವಿರುದ್ಧ ಅರಣ್ಯ ಕಾಯ್ದೆ ಸೆಕ್ಷನ್ 62ರ ಅಡಿ ಅಕ್ರಮ ನಾಟಾ ಜಪ್ತಿ, ಕರ್ನಾಟಕ ಅರಣ್ಯ ನಿಯಮ 144ರ ಅಡಿ ಅಕ್ರಮ ಸಾಗಣೆ ಹಾಗೂ 165ರ ಪ್ರಕಾರ ದಂಡ ಎಂಬ ಮೂರು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ಪ್ರತಿಯನ್ನು ಶುಕ್ರವಾರ ಸಂಜೆಯೇ ಶಿವಮೊಗ್ಗ ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಂಚಾರಿ ಜಾಗೃತ ದಳ ತಿಳಿಸಿದೆ.ಅರಣ್ಯ ಸಂಚಾರಿ ಜಾಗೃತ ದಳದ ಅಧಿಕಾರಿ ಕುಮಾರ್ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಪರವಾನಗಿ ಇಲ್ಲದ ಒಟ್ಟು 126.98 ಘನ ಅಡಿಯ 216 ಸಾಗುವಾನಿ ತುಂಡುಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ 3,17,450ರೂ ಎಂದು ಜಾಗೃತ ದಳ ಅಂದಾಜಿಸಿದೆ.ವಶಪಡಿಸಿಕೊಂಡ ಎಲ್ಲ ಅಕ್ರಮ ಸಾಗುವಾನಿ ನಾಟಾವನ್ನು ದೊಡ್ಡಪೇಟೆ ಠಾಣೆಯ ವೃತ್ತ ನಿರೀಕ್ಷಕರ ಸುಪರ್ದಿಗೆ ವಹಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.