ಭಾನುವಾರ, ನವೆಂಬರ್ 17, 2019
°C

ಮುರುಘೇಂದ್ರ ಶ್ರೀಗಳ ಸ್ಮರಣೋತ್ಸವ ಇಂದಿನಿಂದ

Published:
Updated:

ಹಾವೇರಿ: ಅಥಣಿ ಮುರುಘೇಂದ್ರ ಶಿವಯೋಗಿಗಳವರ 92ನೇ ಸ್ಮರಣೋತ್ಸವ ಹಾಗೂ ಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಇದೇ 25 ಹಾಗೂ 26ರಂದು ತಾಲ್ಲೂಕಿನ ಕುರುಬಗೊಂಡ ಗ್ರಾಮದ ಶ್ರೀಮೃತ್ಯಂಜಯ ಮಠದಲ್ಲಿ ಏರ್ಪಡಿಸಲಾಗಿದೆ.

ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, 25ರ ಬೆಳಗ್ಗೆ 8ಗಂಟೆಗೆ ಶಿವಯೋಗಿಗಳ ಮೂರ್ತಿಗೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ನಡೆಯಲಿದೆ. 9 ಗಂಟೆಗೆ ಪಂಡಿತ್ ವೇದಮೂರ್ತಿ ವೀರಭದ್ರಯ್ಯ ಶಾಸ್ತ್ರಿಯವರಿಂದ ಧರ್ಮ ಧ್ವಜಾರೋಹಣ ನಡೆಯಲಿದೆ. ಸಂಜೆ 7ಗಂಟೆಗೆ ಶರಣೆ ಅಕ್ಕಮಹಾದೇವಿ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಹೊಸಮಠದ ಶಾಂತಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹೊಸರಿತ್ತಿ ಜಿ.ವಿ. ಹಳ್ಳಿಕೇರಿ ಕಾಲೇಜಿನ ಉಪನ್ಯಾಸಕ ಬಿ.ಎಸ್.ಯಾವಗಲ್ ಉಪನ್ಯಾಸ ನೀಡಲಿದ್ದಾರೆ. ವೀರಭದ್ರಯ್ಯಶಾಸ್ತ್ರೀ ಹಿರೇಮಠ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.26ರಂದು ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ಎತ್ತುಗಳಿಗೆ ಸಂಘಟಕರು ಬಹುಮಾನ ವಿತರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಹಾಗಣಾರಾಧನೆ, ಸಂಜೆ 7ಗಂಟೆಗೆ  ಮುರುಘೇಂದ್ರ ಶಿವಯೋಗಿಗಳವರ ಸ್ಮರಣೋತ್ಸವ ನಡೆಯಲಿದೆ. ಅಗಡಿ- ಗುತ್ತಲದ ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮದುರ್ಗದ ಪತ್ರಕರ್ತ ಸಿದ್ದಣ್ಣ ಲಂಗೋಟಿ ಉಪನ್ಯಾಸ ನೀಡುವರು.

ಪ್ರತಿಕ್ರಿಯಿಸಿ (+)