ಮುಳವಾಡ: ಮುಂದುವರಿದ ರೈತರ ಧರಣಿ

7

ಮುಳವಾಡ: ಮುಂದುವರಿದ ರೈತರ ಧರಣಿ

Published:
Updated:

ವಿಜಾಪುರ: ಮುಳವಾಡ ಏತ  ನೀರಾವರಿ ಯೋಜನೆಯ ಬಾಕಿ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಬಸವನ ಬಾಗೇವಾಡಿ ತಾಲ್ಲೂಕು ಮುಳವಾಡದಲ್ಲಿ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ ಮುಂದುವರಿದಿದೆ.`ಒಂದು ವಾರದಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಆಡಳಿತ ಮತ್ತು ಸರ್ಕಾರ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ಗುರುವಾರದಿಂದ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ~ ಎಂದು ಹೋರಾಟ ಸಮಿತಿಯ ಕಾರ್ಯದರ್ಶಿ ಎಚ್.ಎಸ್. ಹೂಗಾರ, ರೈತ ಸಂಘದ ಮುಖಂಡ ಎ.ಎಚ್. ಹೊನ್ನುಟಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಜಿ. ಚೆನ್ನಾಳ, ಎಸ್.ಎ. ಬೀಳಗಿ ಹೇಳಿದರು.`ಈ ಪ್ರತಿಭಟನೆಗೆ ವಿದ್ಯಾರ್ಥಿಗಳೂ ಧುಮುಕಿದ್ದಾರೆ. ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ~ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಲ್.ಬಿ. ಶಿರೂರ, ಚನ್ನಪ್ಪಗೌಡ, ಯಲ್ಲಪ್ಪ ಚಿಕ್ಕಲಕಿ, ಬಸಪ್ಪ ಮಮದಾಪುರ ಎಚ್ಚರಿಸಿದರು.ಗುರುಲಿಂಗ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಿವನಿಂಗಪ್ಪ ಕಳಸಗೊಂಡ, ವೆಂಕಣ್ಣ ದೇಸಾಯಿ, ವೆಂಕಪ್ಪ ಬಂಡಿವಡ್ಡರ, ಮಲ್ಲಪ್ಪ ನವಲಿ, ರವಿ ಕೆಂಗನಾಳ ಬೇಡಿಕೆ ಈಡೇರಿಸಿಕೊಳ್ಳಲು ತಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.ಬಸವರಾಜ ಕೋಲಕಾರ, ಜಿ.ಜಿ. ಕಳಸಗೊಂಡ, ಮಲ್ಲನಗೌಡ ಬಿರಾದಾರ, ಶ್ರೀಶೈಲ ಹಂಚಿನಾಳ, ರಮೇಶ ನಾಗರಾಳ ಇತರರು ಪಾಲ್ಗೊಂಡಿದ್ದರು.ಸಾಕ್ಷರ ಭಾರತ ಕಾರ್ಯಗಾರ

ವಿಜಾಪುರ ತಾಲ್ಲೂಕು ಬರಟಗಿಯಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಾಕ್ಷರ ಭಾರತ ಕಾರ್ಯಕ್ರಮದ ಸ್ವಯಂ ಸೇವಕರ ಬೋಧಕ ತರಬೇತಿ ಕಾರ್ಯಾಗಾರ ನಡೆಯಿತು.ತರಬೇತಿಯ ಸಮಾರೋಪ ಸಮಾರಂಭದಲ್ಲಿ ಊರಿನ ಗಣ್ಯರಾದ ಸಿದ್ಧನಗೌಡ ಬಾ.ಪಾಟೀಲ, ಗ್ರಾ.ಪಂ. ಸದಸ್ಯ ಗೋವಿಂದ ಶಿಂಧೆ, ಧೋಂಡುಸಿಂಗ್ ಪತ್ತಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಖ್ಯ ಅತಿಥಿಯಾಗಿದ್ದರು.ವಿಠ್ಠಲ ಬಿರಾದಾರ, ಈರಣ್ಣ ಕಟಗೇರಿ, ರವಿ ರಾಠೋಡ, ಸಂಪನ್ಮೂಲ ವ್ಯಕ್ತಿಗಳಾದ ಎನ್.ವಿ. ಪಾಟೀಲ, ಎಸ್.ಎಸ್. ಪೂಜಾರಿ, ಬಿ.ಜಿ. ಪೂಜಾರಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry