ಮುಳುಗಿದ ನೌಕೆ: 7 ಮಂದಿ ನಾಪತ್ತೆ

7

ಮುಳುಗಿದ ನೌಕೆ: 7 ಮಂದಿ ನಾಪತ್ತೆ

Published:
Updated:

ಮುಂಬೈ (ಐಎಎನ್‌ಎಸ್): ಇರಾನಿನ ನೌಕೆಯೊಂದು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿದ್ದು, ಅದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ.ಏಳು ಭಾರತೀಯರು ಮುಂಬೈ ಮೂಲದ ಅಡ್ಸನ್ ಆಫ್‌ಶೋರ್ ಡೈವಿಂಗ್ ಕಾಂಟ್ರಾಕ್ಟರ್ಸ್‌ ಪ್ರೈ.ಲಿ.ಯ ಸಿಬ್ಬಂದಿಯಾಗಿದ್ದಾರೆ. ಅವರಲ್ಲಿ ಒಬ್ಬರು ಎಲೆಕ್ಟ್ರೀಷಿಯನ್ ಹಾಗೂ ಇನ್ನುಳಿದ ಆರು ಮಂದಿ ಮುಳುಗುಗಾರರಾಗಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಕಂಪೆನಿಯ ಮಹಿಳಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇರಾನಿಗೆ ಸೇರಿದ ಮುಳುಗುಗಾರರಿಗೆ ನೆರವು ನೀಡುವ ನೌಕೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ 5ರ ಸುಮಾರಿಗೆ ಹಠಾತ್ ಆಗಿ ನೌಕೆಯು ಸಾಗರದಲ್ಲಿ ಮುಳುಗಿದೆ ಎಂಬ ಮಾಹಿತಿ ಕಂಪೆನಿಗೆ ಬಂದಿದೆ.ನೌಕೆಯು 200 ಅಡಿಗಳಿಗಿಂತಲೂ ಹೆಚ್ಚು ಆಳ ಇರುವ ಪ್ರದೇಶದಲ್ಲಿ ಮುಳುಗಿದೆ ಎಂದು ನಂಬಲಾಗಿದೆ. ನೌಕೆಯಲ್ಲಿ ಕೇವಲ ಕೆಲವೇ ಆಮ್ಲಜನಕ ಸಿಲಿಂಡರ್‌ಗಳಿದ್ದವು ಎಂದೂ ತಿಳಿದುಬಂದಿದೆ.ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲು ಕಂಪೆನಿಯ ಉನ್ನತ ಅಧಿಕಾರಿಗಳು ಇರಾನ್‌ಗೆ ತೆರಳಿದ್ದಾರೆ.

ನಾಪತ್ತೆಯಾಗಿರುವವರ ಗುರುತನ್ನು ಬಹಿರಂಗ ಪಡಿಸಲು ಮಹಿಳಾ ಅಧಿಕಾರಿ ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry