ಮುಳೆ ಬಿಎಸ್‌ಆರ್‌ಗೆ ಸೇರ್ಪಡೆ

7
ಪ್ರಜಾವಾಣಿ ವಾರ್ತೆ

ಮುಳೆ ಬಿಎಸ್‌ಆರ್‌ಗೆ ಸೇರ್ಪಡೆ

Published:
Updated:

ಬಸವಕಲ್ಯಾಣ: ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದ ಇಲ್ಲಿನ ಮಾಜಿ ಶಾಸಕ ಮಾರುತಿರಾವ ಜಿ.ಮುಳೆ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಬಿಎಸ್‌ಆರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನ ಕೆಕೆಎಂಪಿಯ ರಮಣಶ್ರೀ ಸಭಾಂಗಣದಲ್ಲಿ ಪಕ್ಷದಿಂದ ಹಮ್ಮಿಕೊಂಡ ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮಾವೇಶದ ಪೂರ್ವಸಿದ್ಧತಾ ಸಭೆಯಲ್ಲಿ ಪಕ್ಷಕ್ಕೆ ಸೇರಿದ್ದಾರೆ.ಮಾಜಿ ಸಚಿವ ಬಿ.ಶ್ರೀರಾಮುಲು ಒಳಗೊಂಡು ಪಕ್ಷದ ಮುಖಂಡರು, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು ಎಂದು ಪಕ್ಷದ ಬಸವಕಲ್ಯಾಣ ತಾಲ್ಲೂಕು ಸಂಚಾಲಕ ಕೃಷ್ಣಾರೆಡ್ಡಿ ನಾರಾಯಣಪುರ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರಮುಖರಾದ ಅರ್ಜುನ ಕನಕ, ಮನೋಹರ ಮೈಸೆ, ರಾಜರೆಡ್ಡಿ ಮಂಠಾಳ, ತಾತೇರಾವ ಪಾಟೀಲ ಮಂಗಳೂರ, ಬ್ರಹ್ಮಾನಂದರೆಡ್ಡಿ, ಬ್ಯಾಂಕ್‌ರೆಡ್ಡಿ ಹುಮನಾಬಾದ್ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಬಸವಾದಿ ಶರಣರ ನಾಡು ಬಸವಕಲ್ಯಾಣದಿಂದಲೇ ಆರಂಭಿಸಬೇಕು ಎಂದು ಎಂ.ಜಿ.ಮುಳೆಯವರು ಬಿ.ಶ್ರೀರಾಮುಲು ಅವರಿಗೆ ಕೇಳಿಕೊಂಡಿದ್ದಾರೆ.ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದು ತಾವು ಪಾದಯಾತ್ರೆ ಸಹ ಅಲ್ಲಿಂದಲೇ ಆರಂಭಿಸಿದ್ದು ಆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry