ಮುಷರಫ್‌ಗೆ ಜಾಮೀನು ರಹಿತ ವಾರೆಂಟ್

7

ಮುಷರಫ್‌ಗೆ ಜಾಮೀನು ರಹಿತ ವಾರೆಂಟ್

Published:
Updated:

ಮುಷರಫ್‌ಗೆ ಜಾಮೀನು ರಹಿತ ವಾರೆಂಟ್

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ರಾವಲ್ಪಿಂಡಿಯಲ್ಲಿರುವ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್‌ನ ವಾದ- ಪ್ರತಿವಾದವನ್ನು ಆಲಿಸಿದ ನಂತರ ಈ ವಾರೆಂಟ್ ಹೊರಡಿಸಿದೆ. ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಮುಷರಫ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅಲ್ಲದೇ ಮುಷರಫ್ ತಲೆ ಮರೆಸಿಕೊಂಡಿರುವ ಆರೋಪಿ ಎಂದೂ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ವಾರೆಂಟ್ ಹೊರಡಿಸಿದ ನಂತರ ನ್ಯಾಯಾಲಯ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿದೆ.

ಅಮೆರಿಕದ ಅಧಿಕಾರಿ ಬಿಡುಗಡೆ: ಪಾಕ್‌ಗೆ ಒತ್ತಾಯ

ಇಸ್ಲಾಮಾಬಾದ್ (ಐಎಎನ್‌ಎಸ್/ಪಿಟಿಐ): ಇಬ್ಬರು ಪಾಕಿಸ್ತಾನಿಯರನ್ನು ಗುಂಡಿಕ್ಕಿ ಕೊಂದ ತನ್ನ ರಾಜತಾಂತ್ರಿಕ ಅಧಿಕಾರಿ ರೇಮಂಡ್ ಡೇವಿಸ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಲಾಹೋರ್‌ನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಕ್ಯಾರ್ಮಿಲ್ಲಾ ಕಾನ್ರಾಯ್ ಅವರು ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ‘ಆರೋಪಿ ಸ್ಥಾನದಲ್ಲಿರುವ ಡೇವಿಸ್ ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ನೌಕರರಾಗಿದ್ದು, ಪಾಕ್ ಸಹ ಸಹಿ ಹಾಕಿರುವ ವಿಯೆನ್ನಾ ಸಮಾವೇಶದ ನಿಯಮದನ್ವಯ ಅವರು ಸಂಪೂರ್ಣವಾಗಿ ರಾಜತಾಂತ್ರಿಕ ವಿನಾಯಿತಿ (ರಕ್ಷಣೆ) ಪಡೆಯಲು ಅರ್ಹರು’ ಎಂದು ಅವರು ಶುಕ್ರವಾರ ರಾತ್ರಿ ಇಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಪಾದರಕ್ಷೆ ಮೇಲೆ ಹಿಂದೂ ದೇವರು- ವಿರೋಧ

ಕ್ವಾಲಾಲಂಪುರ (ಪಿಟಿಐ): ಪಾದರಕ್ಷೆ ಮೇಲೆ ಹಿಂದೂ ದೇವರ ಚಿತ್ರ ಇರುವುದನ್ನು ಮಲೇಷ್ಯಾ ಹಿಂದೂ ಸಂಗಂ ಸೇರಿದಂತೆ ವಿವಿಧ ಭಾರತೀಯ ಜನಾಂಗದವರು ವಿರೋಧಿಸಿದ್ದು, ಇಂತಹ ಪಾದರಕ್ಷೆಗಳನ್ನು ಆಮದು ಮಾಡಿಕೊಂಡಿರುವವರು ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆತ್ಮಾಹುತಿ ದಾಳಿ: 27 ಯಾತ್ರಿಗಳ ಸಾವು

ಬಾಗ್ದಾದ್, (ಎಎಫ್‌ಪಿ): ಸುನ್ನಿ ಪ್ರಾಬಲ್ಯದ ಉತ್ತರ ಬಾಗ್ದಾದ್‌ನ ಸಮರ ನಗರದಲ್ಲಿ ಆತ್ಮಾಹುತಿ ದಾಳಿಕೋರನೊಬ್ಬ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 27 ಮಂದಿ ಶಿಯಾ ಯಾತ್ರಿಗಳು ಸತ್ತಿರುವ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನತದೃಷ್ಟರೆಲ್ಲಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry