ಮುಷರಫ್ ಚಿಕಿತ್ಸೆ: ವಿದೇಶಕ್ಕೆ ಕರೆದೊಯ್ಯದಂತೆ ಮನವಿ

7

ಮುಷರಫ್ ಚಿಕಿತ್ಸೆ: ವಿದೇಶಕ್ಕೆ ಕರೆದೊಯ್ಯದಂತೆ ಮನವಿ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ದೇಶ­ದ್ರೋಹದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಂತೆ ನಿರ್ದೇ­ಶನ ನೀಡಲು ಕೋರಿ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.

ಹರೂನ್‌ ರಶೀದ್‌ ಎಂಬುವವರು ಈ ಮನವಿ ಸಲ್ಲಿಸಿದ್ದಾರೆ. ಇವರು, ೨೦೦೭ರಲ್ಲಿ ಲಾಲ್‌ ಮಸೀದಿ ಮೇಲಿನ ಸೇನಾ ಕಾರ್ಯಾಚರಣೆ ವೇಳೆ ಮೃತ­ಪಟ್ಟ ಅಬ್ದುಲ್‌ ರಶೀದ್‌ ಎಂಬುವವರ ಪುತ್ರ.‘ಮುಷರಫ್‌ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಂತೆ ನೋಡಿ­ಕೊಳ್ಳಲು ಹಾಗೂ ಅವರಿಗೆ ಪಾಕಿಸ್ತಾನ­ದಲ್ಲಿ ಅತ್ಯುತ್ತಮವಾದ ವೈದ್ಯಕೀಯ ಸೌಲಭ್ಯ ಒದಗಿಸಲು ಒಳಾಡಳಿತ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಅವರು ನ್ಯಾಯಾಲಯ­ವನ್ನು ಕೋರಿ­ಕೊಂಡಿದ್ದಾರೆ.ದೇಶದ್ರೋಹ ಪ್ರಕರಣದ ವಿಚಾರಣೆ­ಗೆಂದು ವಿಶೇಷ ನ್ಯಾಯಾಲಯಕ್ಕೆ ಗುರು­ವಾರ  ತೆರಳುತ್ತಿದ್ದಾಗ ಮಾರ್ಗ­ಮಧ್ಯೆ ಹೃದಯಾಘಾತಕ್ಕೆ ಒಳಗಾಗಿದ್ದ ಮುಷ­ರಫ್‌ ಅವರನ್ನು ರಾವಲ್ಪಿಂಡಿಯ ಸೇನಾ  ಆಸ್ಪತ್ರೆಗೆ ಸೇರಿಸಲಾಗಿದೆ.   ವೈದ್ಯಕೀಯ ಚಿಕಿತ್ಸೆಗಾಗಿ ಮುಷರಫ್‌ ಅವರನ್ನು ವಿದೇಶಕ್ಕೆ ಕಳಿಸುವ ಸಾಧ್ಯ­ತೆಯ ಬಗ್ಗೆ ದಟ್ಟ ವದಂತಿ ಇದೆ. ಹಾಗಾಗಿ ಹರೂನ್‌ ಅವರು ಈ ಮನವಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry