ಮುಷರಫ್ ಬಂಧನಕ್ಕೆ ವಾರೆಂಟ್

7

ಮುಷರಫ್ ಬಂಧನಕ್ಕೆ ವಾರೆಂಟ್

Published:
Updated:

ಇಸ್ಲಾಮಾಬಾದ್ (ಪಿಟಿಐ): ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು 2006ರಲ್ಲಿ ಹತ್ಯೆ ಮಾಡಿದ ಆಪಾದನೆಗಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಮತ್ತು ಮಾಜಿ ಪ್ರಧಾನಿ ಶೌಕತ್ ಅಜಿಜ್ ಅವರನ್ನು ಬಂಧಿಸಲು ನ್ಯಾಯಾಲಯವು ವಾರೆಂಟ್ ಹೊರಡಿಸಿದೆ.ಈ ಪ್ರಕರಣದಲ್ಲಿ ಪ್ರಾಂತೀಯ ಸರ್ಕಾರದ ಮಾಜಿ ಗೃಹ ಸಚಿವ ಶೋಯೆಬ್ ಅಹಮದ್ ಅವರನ್ನು ಬಂಧಿಸಲು ಪೊಲೀಸರು ಈಗಾಗಲೇ ವಾರೆಂಟ್ ಪಡೆದಿದ್ದಾರೆ. ಸದ್ಯ ಗಡೀಪಾರಾಗಿರುವ ಮುಷರಫ್ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಬಲೂಚಿಸ್ತಾನ ಸರ್ಕಾರವು  ಫೆಡರಲ್ ಸರ್ಕಾರವನ್ನು ಕೋರಿತ್ತು.ಈ ಹಿನ್ನೆಲೆಯಲ್ಲಿ ಅದು ಬಂಧನದ ವಾರೆಂಟ್ ಪಡೆಯುವಂತೆ ಬಲೂಚಿಸ್ತಾನ ಸರ್ಕಾರಕ್ಕೆ ತಿಳಿಸಿತ್ತು. ನ್ಯಾಯಾಲಯದ ಬಂಧನದ ವಾರೆಂಟ್ ಇದ್ದರೆ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನ್‌ರ್ ನೋಟಿಸ್ ಜಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಫೆಡರಲ್ ಸರ್ಕಾರ ತಿಳಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry