ಮಂಗಳವಾರ, ನವೆಂಬರ್ 12, 2019
19 °C

ಮುಷರಫ್ ವಾಪಸ್‌ಗೆ ಸೇನೆ ವಿರೋಧ?

Published:
Updated:

ಇಸ್ಲಾಮಾಬಾದ್ (ಪಿಟಿಐ): ಸ್ವಇಚ್ಛೆಯಿಂದ ನಾಲ್ಕು ವರ್ಷಗಳ ಕಾಲ ದೇಶ ತೊರೆದಿದ್ದ ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಹಾಗೂ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಅವರು ದೇಶಕ್ಕೆ ವಾಪಸಾಗುವುದರ ಬಗ್ಗೆ ಪಾಕಿಸ್ತಾನ ಸೇನೆ ಮತ್ತು ಹಿರಿಯ ರಾಜಕೀಯ ಮುಖಂಡರ ವಿರೋಧವಿತ್ತು.ಮುಷರಫ್ ವಾಪಸಾಗುವ ಒಂದು ದಿನ ಮೊದಲು ಸೇನೆಯ ಹಿರಿಯ ಅಧಿಕಾರಿಗಳು ಸ್ವದೇಶಕ್ಕೆ ಮರಳದಂತೆ ಮನವಿ ಅವರಿಗೆ ಮಾಡಿದ್ದರು ಎಂದು `ಎಕ್ಸ್‌ಪ್ರೆಸ್ ಟ್ರಿಬೂನ್' ವರದಿ ಮಾಡಿದೆ. ದೇಶಕ್ಕೆ ವಾಪಸಾದರೆ ಮುಷರಫ್ ಜೀವಕ್ಕೆ ಅಪಾಯವಿದೆ ಎಂಬುದು ಸೇನೆಯ ಆತಂಕವಾದರೆ, ಮುಷರಫ್ ಅವರಿಂದ ರಾಜಕೀಯ ವಿವಾದಗಳು ಆರಂಭವಾಗುತ್ತದೆ ಎಂಬುದು ರಾಜಕಾರಣಿಗಳ ಚಿಂತೆಯಾಗಿತ್ತು ಎಂದು ವರದಿ ತಿಳಿಸಿದೆ.

ಪ್ರತಿಕ್ರಿಯಿಸಿ (+)