ಮುಷರಫ್ ವಿರುದ್ಧ ಮತ್ತೆ ಕೊಲೆ ಪ್ರಕರಣ

7

ಮುಷರಫ್ ವಿರುದ್ಧ ಮತ್ತೆ ಕೊಲೆ ಪ್ರಕರಣ

Published:
Updated:

ಇಸ್ಲಾಮಾಬಾದ್ (ಪಿಟಿಐ): ಲಾಲ್ ಮಸೀದಿ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ  ನಡೆದ ಧರ್ಮಗುರು ಅಬ್ದುಲ್ ರಶೀದ್, ಅವರ ತಾಯಿ ಮತ್ತು ಧಾರ್ಮಿಕ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ  ಹತ್ಯೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.ಇಸ್ಲಾಮಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ನೂರುಲ್ ಹಖ್ ಖುರೇಷಿ ಅವರ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಹತ್ಯೆಗೀಡಾದ ಧರ್ಮಗುರು ರಶೀದ್ ಅವರ ಪುತ್ರ ಹರೂನ್ ರಶೀದ್ ಅವರು ಸಲ್ಲಿಸಿದ್ದ ದೂರಿನ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ  ನ್ಯಾಯಮೂರ್ತಿ ಖುರೇಶಿ ಅವರು ತಮ್ಮ ಮೊದಲಿನ ಆದೇಶವನ್ನು ಪಾಲಿಸದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಆದೇಶ ಪಾಲಿಸದಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಪೊಲೀಸರಿಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಆಬಪಾರಾ ಪೊಲೀಸ್ ಠಾಣೆಯ ಅಧಿಕಾರಿಗಳು ಮುಷರಫ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry