ಮುಷ್ಕರ: ಮಾರುತಿ ಡೀಸೆಲ್ ಚಾಲಿತ ಕಾರು ವಿತರಣೆ ವಿಳಂಬ

ಮಂಗಳವಾರ, ಜೂಲೈ 23, 2019
27 °C

ಮುಷ್ಕರ: ಮಾರುತಿ ಡೀಸೆಲ್ ಚಾಲಿತ ಕಾರು ವಿತರಣೆ ವಿಳಂಬ

Published:
Updated:

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾದ ಮಾನೆಸರ್ ಘಟಕದಲ್ಲಿನ ಕಾರ್ಮಿಕರ ಮುಷ್ಕರವು 12ನೇ ದಿನಕ್ಕೆ ಕಾಲಿಟ್ಟಿದ್ದು, ಆಯ್ದ ಡೀಸೆಲ್ ಕಾರುಗಳ ವಿತರಣೆಯು ಹೆಚ್ಚುವರಿಯಾಗಿ ಇನ್ನೂ ಒಂದು ತಿಂಗಳು ವಿಳಂಬಗೊಳ್ಳಲಿದೆ.ಸ್ವಿಫ್ಟ್, ಡಿಝೈರ್ ಮತ್ತು ಎಸ್‌ಎಕ್ಸ್4 ಕಾರು ವಿತರಿಸುವುದು ತಡವಾಗಲಿದೆ. ಮುಷ್ಕರದ ಮುಂಚೆಯೂ ಈ ಮಾದರಿ ಕಾರುಗಳ ವಿತರಣೆಯು 1ರಿಂದ ನಾಲ್ಕು ತಿಂಗಳು ವಿಳಂಬವಾಗುತ್ತಿತ್ತು. ಮುಷ್ಕರದ ಕಾರಣಕ್ಕೆ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ತಿಂಗಳ ಮಾರಾಟವು ಕುಸಿತಗೊಳ್ಳಲಿದೆ ಎಂದು `ಎಂಎಸ್‌ಐ~ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry