ಮೂಗೂರು: ತಿಬ್ಬಾದೇವಿಗೆ ವಿಶೇಷ ಪೂಜೆ ಇಂದು

ಶನಿವಾರ, ಜೂಲೈ 20, 2019
28 °C

ಮೂಗೂರು: ತಿಬ್ಬಾದೇವಿಗೆ ವಿಶೇಷ ಪೂಜೆ ಇಂದು

Published:
Updated:

ಮೈಸೂರು /ತಿ. ನರಸೀಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮೂಗೂರಿನ    ಶ್ರೀ ತ್ರಿಪುರಸುಂದರಿ ಅಮ್ಮನವರಿಗೆ ಆಷಾಢಮಾಸದ ಶುಕ್ರವಾರ ಅಂಗವಾಗಿ ಜುಲೈ 19ರಂದು ವಿಶೇಷ ಪೂಜೆ ಹಾಗೂ ಹೂವಿನ ಸೀರೆ ಅಲಂಕಾರ ಕಾರ್ಯಕ್ರಮ ಆಯೊಜಿಸಲಾಗಿದೆ.ಪ್ರತಿವರ್ಷ ಆಷಾಢಮಾಸದಲ್ಲಿ ಈ ಕಾರ್ಯಕ್ರಮವನ್ನು ಬಹುವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು 5ರಿಂದ 6ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗುವುದು ಎಂದು ಬೆಂಗಳೂರಿನ ದೇವಿ ಸಿಲ್ಕ್ ಟ್ರೇಡರ್ಸ್‌ನ    ಎಂ.ಎಸ್. ಸುಧಾಕರ್ ಮತ್ತು ಸಹೋದರರು ತಿಳಿಸಿದ್ದಾರೆ.ವಿವಿಧ ದೇವರ ಚಿತ್ರಗಳುಳ್ಳ ಆರ್ಚ್‌ಗಳಿಗೆ ದೀಪಾಲಂಕಾರ ಮಾಡಲಾಗುವುದು. ಗ್ರಾಮದ ದೇಶೇಶ್ವರ ಸ್ವಾಮಿ, ವೀರಭದ್ರ ಸ್ವಾಮಿ, ರಾಕಸಮ್ಮನ ದೇವಾಲಯದಲ್ಲೂ ವಿಶೇಷ ಪೂಜೆ, ಅಲಂಕಾರಗಳು ಜರುಗುವವು. ದೇವಸ್ಥಾನದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry