ಮೂಡಿಗೆರೆ: ತಾ.ಪಂ: ಅವ್ಯವಹಾರ ಆರೋಪ

7

ಮೂಡಿಗೆರೆ: ತಾ.ಪಂ: ಅವ್ಯವಹಾರ ಆರೋಪ

Published:
Updated:

ಮೂಡಿಗೆರೆ : ಇಲ್ಲಿನ ತಾಲ್ಲೂಕು ಪಂಚಾಯತಿಯ ಹಳೆಯ ಜೀಪಿನ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿ ರುವ ರಂಜನ್ ಅಜಿತ್ ಕುಮಾರ್ ರವರು ಆರೋಪಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಪಂಚಾಯತಿ ಅಧ್ಯಕ್ಷರ ಅನುಪಸ್ಥಿತಿ ಇದ್ದರೂ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾ ಹಣಾಧಿಕಾರಿ ಲಕ್ಷ್ಮಿ ಕಾಂತ್ ಅವರು ಅಧ್ಯಕ್ಷರು ಹಾಜರಿ ್ದದರು ಎಂದು ದಾಖಲೆಗಳನ್ನು ಸೃಷ್ಟಿಸಿ 80 ಸಾವಿರ ಮೌಲ್ಯದ ಹಳೆ ಜೀಪನ್ನು ಕೇವಲ 42 ಸಾವಿರಕ್ಕೆ ಹರಾಜು ಮಾಡಲಾಗಿದೆ. ಎಂದು ಆರೋಪಿಸಿದರು. ಸಾರಿಗೆ ಅಧಿಕಾರಿಯಿಂದ 80 ಸಾವಿರ ಬೆಲೆಯನ್ನು ದೃಢಪಡಿಸಿಕೊಂಡು ತಾಲ್ಲೂಕು ಪಂಚಾಯತಿಯ ಯಾವುದೇ ಪದಾಧಿಕಾರಿಗಳ ಗಮನಕ್ಕೆ ತಾರದೇ ಹರಾಜು ನಡೆಸಲಾಗಿದೆ. ಹರಾಜಿನಲ್ಲಿ ಚಿಕ್ಕಮಗಳೂರಿನ ಗೀತಾ ಸ್ಟೋರ್‌ನ ಆರ್.ಆರ್.ನಾಯ್ಕ ಎಂಬುವವರಿಗೆ 42 ಸಾವಿರಕ್ಕೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.  ಹರಾಜಿನಲ್ಲಿ ಪಾಲ್ಗೊಂಡಿದ್ದ ಆರ್.ಆರ್.ನಾಯ್ಕ ಅವರನ್ನು ದೂರವಾಣಿ ಯಲ್ಲಿ ಸಂಪರ್ಕಿಸಿದಾಗ ಹರಾಜು ನಡೆದದ್ದು ನಿಜ. ಸುಮಾರು ಆರು ಜನಗಳು ಹರಾಜಿನಲ್ಲಿ ಭಾಗವಹಿಸಿದ್ದು, ಅಂತಿಮ ಬಿಡ್‌ದಾರನಾಗಿ ತಾವು 42 ಸಾವಿರಕ್ಕೆ ನಿಲ್ಲಿಸಿದೆ. ಕೆಲ ಹೊತ್ತಿನ ಬಳಿಕ ಅಧಿಕಾರಿಗಳು ಕೆಲವು ಸಬೂಬುಗಳನ್ನು ಹೇಳಿ ಹರಾಜನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿ ವಾಪಾಸ್ಸು ಕಳಿಸಿದರು. ಠೇವಣಿ ಹಣ ಇನ್ನೂ ಮೂಡಿಗೆರೆ ತಾಲ್ಲೂಕು ಪಂಚಾಯತಿಯಲ್ಲಿದೆ ಎಂದು ತಿಳಿಸಿದರು.ಈ ಕುರಿತು ಪ್ರಜಾವಾಣಿ  ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹ ಣಾಧಿಕಾರಿ ಲಕ್ಷ್ಮಿಕಾಂತ್ ಅವರ ಕಚೇರಿ ದೂರವಾಣಿಗೆ ಸಂಪರ್ಕಿಸಿದಾಗ ಅವರು ಒಂದು ವಾರಗಳ ಕಾಲ ರಜೆಯಲ್ಲಿದ್ದು, ಪ್ರಭಾರಿಯಾಗಿರುವ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಣಾ ಧಿಕಾರಿ ಮಂಜುನಾಥ್ ಪ್ರತಿಕ್ರಿಹಿಸಿ, ಸರ್ಕಾರಿ ಬೆಲೆಗಿಂತಲೂ ಕಡಿಮೆ ದರಕ್ಕೆ ಹರಾಜು ನಿಂತಿರುವುದರಿಂದ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಮಾತ್ರ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿಗೆ ಅಧಿಕಾರ ವಿರುವುದರಿಂದ  ಹರಾಜನ್ನು ತಡೆಹಿಡಿದು, ವರದಿ ನೀಡಲಾಗಿದೆ ಎಂದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry