ಮೂಡಿಗೆರೆ: ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ

ಶುಕ್ರವಾರ, ಜೂಲೈ 19, 2019
23 °C

ಮೂಡಿಗೆರೆ: ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ

Published:
Updated:

ಮೂಡಿಗೆರೆ: ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಹೇಳಿದರು. `ಪ್ರಜಾವಾಣಿ~ಯೊಂದಿಗೆ ಬುಧವಾರ ಮಾತನಾಡಿದ ಅವರು, ಬಿತ್ತನೆ ಬೀಜಗಳಾದ ತುಂಗಾ, ಐಇಟಿ-7191, ಬಾಂಗ್ಲಾ, ಎಂಟಿಯು 1001-1010, ಐಆರ್ 64 ಲಭ್ಯ ಇದ್ದು, ತಾಲ್ಲೂಕಿನ ಗೋಣಿಬೀಡು, ಕಳಸ ತಾಲ್ಲೂಕು ಕೃಷಿ ಕಚೇರಿಯಲ್ಲಿ ಅಗತ್ಯ ದಾಖಲೆ ನೀಡಿ ಪಡೆಯಬಹುದು ಎಂದರು.

ಈಗಾಗಲೇ  ದೀರ್ಘಾವಧಿ ಭತ್ತದ ಬೆಳೆ ಸಸಿ ಮಡಿ ಮಾಡುವ ಕಾರ್ಯಕ್ಕೆ ರೈತರು ನಿರತರಾಗಿದ್ದು, ತುಂಗಾ, ಐಇಟಿ-7191, ಜೂನ್ 20ರ ವರೆಗೆ ಸಸಿ ಮಡಿ ಮಾಡಿ, ಜುಲೈ 25ರ ವರೆಗೆ ನಾಟಿ ಕಾರ್ಯ ಮಾಡಲು ಸೂಕ್ತ ಸಮಯವಾಗಿದ್ದು, ಉಳಿದ ಅಲ್ಪಾವದಿ ತಳಿಯನ್ನು ಆಗಸ್ಟ್15ರವರೆಗೆ ನಾಟಿ ಕಾರ್ಯಮಾಡಬಹುದಾಗಿದೆ ಎಂದರು.  ತಾಲ್ಲೂಕಿನಲ್ಲಿ ಭತ್ತದ ನಾಟಿ ಕಾರ್ಯಕ್ಕೆ 10 ಸಾವಿರ ಹೆಕ್ಟೇರ್ ಪ್ರದೇಶ ಇದ್ದು, ಈ ಭಾರಿ ಹೆಚ್ಚಿನ ಜನರು ಶುಂಠಿ ಬೆಳೆಹಾಕಿರುವುದರಿಂದ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಲಿದೆ ಎಂದರು.

ರಾಜ್ಯ ಸರ್ಕಾರ ನಾಟಿ ಯಂತ್ರದ ಮೂಲಕ ಭತ್ತನಾಟಿ ಕಾರ್ಯಮಾಡುವ ರೈತರಿಗೆ ಪ್ರತಿ ಎಕರೆಗೆ ರೂ.1ಸಾವಿರ ಸಹಾಯಧನ ನೀಡಲಿದ್ದು, ಆಸಕ್ತರು ಕಚೇರಿಯಲ್ಲಿ ಮಾಹಿತಿ ಪಡೆಯಲು ತಿಳಿಸಿದರು.

ಸುವರ್ಣಭೂಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಣ್ಣ, ಅತಿಸಣ್ಣ, ಎಲ್ಲ ರೈತರಿಗೆ ಸರ್ಕಾರದ ಅನುದಾನ ದೊರೆಯಲಿದ್ದು ಲಾಟಿರಿ ಪದ್ದತಿ ಇಲ್ಲ ಎಂದರು.

ಕೃಷಿ ಇಲಾಖೆಯಲ್ಲಿ ಕೃಷಿ ಸಹಾಯಕರ ಹಾಗೂ ಇತರೆ ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆ ಇರುವುದರಿಂದ ತಾಲ್ಲೂಕಿ ಗೋಣಿಬೀಡು,ಕಳಸ,ಮೂಡಿಗೆರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ತಾಂತ್ರಿಕ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry