ಮೂಡುಬಿದಿರೆ ಗಣೇಶೋತ್ಸವ ಜಿಲ್ಲೆಗೆ ಮಾದರಿ

7

ಮೂಡುಬಿದಿರೆ ಗಣೇಶೋತ್ಸವ ಜಿಲ್ಲೆಗೆ ಮಾದರಿ

Published:
Updated:
ಮೂಡುಬಿದಿರೆ ಗಣೇಶೋತ್ಸವ ಜಿಲ್ಲೆಗೆ ಮಾದರಿ

ಮೂಡುಬಿದಿರೆ: ಕೇವಲ ಧಾರ್ಮಿಕ ಕಾರ್ಯ­ಕ್ರಮಗಳಿಗೆ ಸೀಮಿತವಾಗದ ಮೂಡುಬಿದಿರೆ ಗಣೇಶೋತ್ಸವ ಜಿಲ್ಲೆಗೆ ಮಾದರಿ ಎಂದು ಆಳ್ವಾಸ್‌ ಶಿಕ್ಷನ ಪ್ರತಿಷ್ಠಾನದ ಅಧ್ಯಕ್ಷ ಡಾ,ಎಂ ಮೋಹನ ಅಳ್ವ ಹೇಳಿದರು.ಇಲ್ಲಿನ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ಸಾವರ್ಜನಿಕ ಗಣೇಶೊತ್ಸವದ ಸುವರ್ಣ ಸಮಾರಂಭದ ಸಮಾರೋಪದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.ನಿರಂತರ 25 ವರ್ಷದಿಂದ ಸಾರ್ವಜನಿಕ ಗಣೇಶೊತ್ಸವವನ್ನು ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ನಿಂತು ಆಚರಿಸಿಕೊಂಡು ಬರುತ್ತಿರುವ ಅಮರನಾಥ ಶೆಟ್ಟಿ ಧಾರ್ಮಿಕ ರಂಗದ ಹರಿಕಾರ ಎಂದರು. ಇದೇ ವೇಳೆ ಗಣೆಶೋತ್ಸವ ಸುವರ್ಣ ಸಂಭ್ರಮದ ಅಧ್ಯಕ್ಷ ಅಮರನಾಥ ಶೆಟ್ಟಿ ಅವರನ್ನು ಸಮಿತಿ ಪರವಾಗಿ ’ಧರ್ಮಭೂಷಣ’ ಬಿರುದು ನೀಡಿ ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್‌ ನಾರಾಯಣ ಸುರತ್ಕಲ್‌ ಇವರನ್ನು ಸನ್ಮಾನಿಸಲಾಯಿತು.ಧನಂಜಯ್‌ ಮೂಡುಬಿದಿರೆ ಮತ್ತು ಶಾಂತರಾಮ್‌ ಕುಡ್ವಾ ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಕಸ್ಟಮ್ಸ್‌ ಅಧಿಕಾರಿ ಸುಕುಮಾರ್‌, ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ,  ದಾನಿ ವಿಜಾಪುರದ ಬಸವರಾಜ್‌ ಮಜ್ಜಗಿ, ಸಮಿತಿ ಪ್ರಮುಖರಾದ ಕೆ.  ಮತ್ತಿತರರು ಉಪಸ್ಥಿತರಿದ್ದರು.ರಾಜರಾಂ ನಾಗರಕಟ್ಟೆ ಸನ್ಮಾನಿತರ ವಿವರ ನೀಡಿದರು. ಯತಿರಾಜ್‌ ಶೆಟ್ಟಿ, ಪ್ರಸನ್ನ ಶೆಣೈ, ಗೋಪಾಲ ಕ್ರೀಡೆ  ಹಾಗೂ ಸಾಂಸ್ಕೃತಿಕ   ಸ್ಪಧಿರ್ಗಳ ವಿವರ ನೀಡಿದರು. ನಾರಾಯಣ ಪಿಎಂ ಸ್ವಾಗತಿಸಿ ಮೋಹನ್‌ದಾಸ್‌ ಶೆಟ್ಟಿ ವಂದಿಸಿ

ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry