ಶುಕ್ರವಾರ, ನವೆಂಬರ್ 15, 2019
23 °C

ಮೂಡುಬಿದಿರೆ: 26ಕ್ಕೆ ವರುಣ್ ಗಾಂಧಿ ಭೇಟಿ

Published:
Updated:

ಮೂಡುಬಿದಿರೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ್ ಸದಸ್ಯ ವರುಣ್ ಗಾಂಧಿ ಇದೇ 26ರಂದು ಬಿಜೆಪಿ ಪರ ಚುನಾವಣೆ ಪ್ರಚಾರ ನಡೆಸಲು ಮೂಡುಬಿದಿರೆಗೆ ಆಗಮಿಸಲಿದ್ದಾರೆ.ಪಕ್ಷದ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ವರುಣ್ ಗಾಂಧಿ, ಪೊಳಲಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಳಿಕ ಬೆಳಿಗ್ಗೆ 10.45ಕ್ಕೆ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯುವ ಚುನಾವಣೆ ಸಭೆಯಲ್ಲಿ ಪ್ರಚಾರ ಭಾಷಣ ಮಾಡುವರು.ಬಿಜೆಪಿ ಯುವ ಮೋರ್ಚಾ ರಾಜ್ಯಧ್ಯಕ್ಷ ಸುನಿಲ್ ಕುಮಾರ್, ಸಂಸದ್ ಸದಸ್ಯ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ.27ಕ್ಕೆ ಮಹಾ ಅಭಿಯಾನ: ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನೊಳಗೊಂಡ ತಂಡ ಇದೇ 27ಕ್ಕೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸುವ ಮಹಾ ಅಭಿಯಾನ ನಡೆಯಲಿದೆ ಎಂದರು.ಪಕ್ಷದ ಮುಖಂಡರಾದ ಕೆ.ಆರ್ ಪಂಡಿತ್, ಬಾಹುಬಲಿ ಪ್ರಸಾದ್, ಸುಚರಿತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)