ಶುಕ್ರವಾರ, ನವೆಂಬರ್ 22, 2019
27 °C

ಮೂಢನಂಬಿಕೆ ತೊಡೆದು ಹಾಕಲು ಸಲಹೆ

Published:
Updated:

ಗುಳೇದಗುಡ್ಡ: ಮೂಢನಂಬಿಕೆ ಒಂದು ಸಾಮಾಜಿಕ ಅನಿಷ್ಟ ಪದ್ಧತಿಯಾಗಿದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸದ ಸಾಮರ್ಥ್ಯ ಕುಗ್ಗುತ್ತಿದೆ. ಮೂಢನಂಬಿಕೆ ತೊಡೆದು ಹಾಕುವಲ್ಲಿ ಕವಿ ಮತ್ತು ತಂತ್ರಜ್ಞಾನ ಅಕಾಡೆಮಿ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಸಿ.ಜಿ. ಹವಾಲ್ದಾರ್ ಹೇಳಿದರು. ಯುವಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ನಡೆದ ಮೂಡನಂಭಿಕೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸ್ವ ಸಹಾಯ ಗುಂಪುಗಳಿಗೆ ಪುಸ್ತಕ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹುನಗುಂದ ಬರ್ಡ್ಸ್ ಸಂಸ್ಥೆಯ ನಿರ್ದೇಶಕ ಮಹಾಂತೇಶ ಅಗಸಿಮುಂದಿನ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಐ.ಸಿ. ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹುನಗುಂದ ಪಿ.ವಿ. ಕುಲಕರ್ಣಿ, ಇಳಕಲ್‌ದ ಪಿ.ಐ. ಮುಚಖಂಡಿ ಅವರು ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್. ಗುರಿಕಾರ, ಧ್ವನಿ ಒಕ್ಕೂಟದ ಅಧ್ಯಕ್ಷ ಸೋಮಶೇಖರ ಬಂಕಾಪುರ, ಕಾರ್ಯದರ್ಶಿ ದ್ರಾಕ್ಷಾಯಣಿ ಬಂಡಿ, ಬಸವರಾಜ ಯಂಡಿಗೇರಿ, ಸಂಗಮೇಶ ಬಂಡಿ, ಸಿದ್ದು ಮಾರಬಸರಿ, ಶ್ರೀಕಾಂತ ಹುನಗುಂದ, ರವಿ ರಾಜೂರ, ಮಲ್ಲಿಕಾರ್ಜುನ ಕಲಕೇರಿ, ಜಿ.ಎನ್. ರಾಠಿ, ಮಲ್ಲಿಕಾರ್ಜುನ ಮೊರಬದ, ಬೆನಕಪ್ಪ ಶೇಬಿನಕಟ್ಟಿ ಇತರರು ಉಪಸ್ಥಿತರಿದ್ದರು. ಐ.ಎಸ್. ಯಂಡಿಗೇರಿ ಸ್ವಾಗತಿಸಿದರು. ಪ್ರಾಚಾರ್ಯ ಪ್ರಕಾಶ ನರಗುಂದ ನಿರೂಪಿಸಿದರು. ಹುಚ್ಚೇಶ ಯಂಡಿಗೇರಿ ವಂದಿಸಿದರು.

ಪ್ರತಿಕ್ರಿಯಿಸಿ (+)