ಮಂಗಳವಾರ, ನವೆಂಬರ್ 12, 2019
19 °C

`ಮೂರನೇ ಕ್ರಮಾಂಕ ಖುಷಿ ನೀಡಿದೆ'

Published:
Updated:

ಮುಂಬೈ (ಪಿಟಿಐ): `ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಖುಷಿ ನೀಡಿದೆ' ಎಂದು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.`ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಅಲ್ಲಿ ನೀಡಿದ ಪ್ರದರ್ಶನ ಐಪಿಎಲ್‌ಗೆ ಸಹಕಾರಿಯಾಯಿತು. ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟವಾಡಿದ್ದರಿಂದ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರೂ, ಉತ್ತಮ ಮೊತ್ತ ಗಳಿಸಬಲ್ಲೆ ಎನ್ನುವ ವಿಶ್ವಾಸ ಮೂಡಿದೆ' ಎಂದೂ ಅವರು ನುಡಿದರು.ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತ್ತು. ಆದರೆ, ಮಾಹೇಲ ಜಯವರ್ಧನೆ ನೇತೃತ್ವದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಮಾತ್ರ ಗಳಿಸಿತು. ಇದರಿಂದ ಇಂಡಿಯನ್ಸ್ 44 ರನ್‌ಗಳ ಗೆಲುವು ಪಡೆದಿತ್ತು.`ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರಿಂದ ಪವರ್ ಪ್ಲೇ ಓವರ್‌ನಲ್ಲಿ ಹೆಚ್ಚು ರನ್ ಗಳಿಸಲು ಅವಕಾಶ ಲಭಿಸಿತು. ತಂಡ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದೆ. ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಬೇಗನೇ ಕಳೆದುಕೊಂಡ ಕಾರಣ, ರನ್ ಗಳಿಸಬೇಕಾದ ಜವಾಬ್ದಾರಿ ಇತ್ತು' ಎಂದು ಕಾರ್ತಿಕ್ ಹೇಳಿದರು. ಈ ಸಲದ ಐಪಿಎಲ್‌ನಲ್ಲಿ ಕಾರ್ತಿಕ್ ಮೂರು ಪಂದ್ಯಗಳಿಂದ 183 ರನ್‌ಗಳನ್ನು ಕಲೆ ಹಾಕಿದ್ದಾರೆ. ಡೇರ್‌ಡೆವಿಲ್ಸ್ ವಿರುದ್ಧ ಮಂಗಳವಾರದ ಪಂದ್ಯದಲ್ಲಿ ಈ ಬ್ಯಾಟ್ಸ್‌ಮನ್ 86 ರನ್‌ಗಳನ್ನು ಗಳಿಸಿದ್ದರು.ಪುಟಿದೇಳುವ ವಿಶ್ವಾಸವಿದೆ: `ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲು ಕಂಡು ತಂಡ ಸಂಕಷ್ಟಕ್ಕೆ ಸಿಲುಕಿದೆ.

ಆದರೆ, ಪುಟಿದೇಳುವ ವಿಶ್ವಾಸವಿದೆ' ಎಂದು ಡೇರ್‌ಡೆವಿಲ್ಸ್ ತಂಡದ ಮನ್‌ಪ್ರೀತ್ ಜುನೆಜಾ ವಿಶ್ವಾಸ ವ್ಯಕ್ತಪಡಿಸಿದರು.`ವೀರೇಂದ್ರ ಸೆಹ್ವಾಗ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಪೂರ್ಣವಾಗಿ ಫಿಟ್ ಆಗಿಲ್ಲ. `ವೀರೂ' ಮರಳಿದರೆ ತಂಡ ಬಲಿಷ್ಠವಾಗುತ್ತದೆ' ಎಂದು ಜುನೆಜಾ ಪಂದ್ಯದ ನಂತರ ಪ್ರತಿಕ್ರಿಯಿಸಿದರು.                                                       ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209ಡೆಲ್ಲಿ ಡೇರ್‌ಡೆವಿಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165ಉನ್ಮುಕ್ತ್ ಚಾಂದ್ ಸಿ ಪಾಂಟಿಂಗ್ ಬಿ ಹರಭಜನ್ ಸಿಂಗ್  00

ಡೇವಿಡ್ ವಾರ್ನರ್ ಸಿ ರಾಯುಡು ಬಿ ಮಿಷೆಲ್ ಜಾನ್ಸನ್  61

ಮಾಹೇಲ ಜಯವರ್ಧನೆ ಸಿ ಕಾರ್ತಿಕ್ ಬಿ ಮಿಷೆಲ್ ಜಾನ್ಸನ್  03

ಮನ್‌ಪ್ರೀತ್ ಜುನೇಜಾ ರನೌಟ್  49

ಜೀವನ್ ಮೆಂಡಿಸ್ ಸಿ ಮತ್ತು ಬಿ ಕೀರನ್ ಪೊಲಾರ್ಡ್  00

ಇರ್ಫಾನ್ ಪಠಾಣ್ ಸಿ ಜಾನ್ಸನ್ ಬಿ ಪ್ರಗ್ಯಾನ್ ಓಜಾ  10

ಕೇದಾರ್ ಜಾದವ್ ಸಿ ಮತ್ತು ಬಿ ಲಸಿತ್ ಮಾಲಿಂಗ  01

ಶಹಜಾಬ್ ನದೀಮ್ ಸಿ ಧವನ್ ಬಿ ಪ್ರಗ್ಯಾನ್ ಓಜಾ  02

ಮಾರ್ನ್ ಮಾರ್ಕೆಲ್ ಔಟಾಗದೆ  23

ಆಶೀಶ್ ನೆಹ್ರಾ ಸಿ ಓಜಾ ಬಿ ಕೀರನ್ ಪೊಲಾರ್ಡ್  01

ಉಮೇಶ್ ಯಾದವ್ ಔಟಾಗದೆ  05

ಇತರೆ: (ಬೈ-1, ಲೆಗ್‌ಬೈ-1, ವೈಡ್-8) 10

ವಿಕೆಟ್ ಪತನ: 1-0 (ಚಾಂದ್; 0.1), 2-13 (ಜಯವರ್ಧನೆ; 2.4), 3-95 (ವಾರ್ನರ್; 10.4), 4-97 (ಮೆಂಡಿಸ್; 11.1), 5-118 (ಪಠಾಣ್; 14.1), 6-127 (ಜಾಧವ್; 15.2), 7-134 (ನದೀಮ್; 16.3), 8-140 (ಜುನೇಜಾ; 17.4), 9-154 (ನೆಹ್ರಾ; 19.1)

ಬೌಲಿಂಗ್: ಹರಭಜನ್ ಸಿಂಗ್ 4-0-25-1, ಲಸಿತ್ ಮಾಲಿಂಗ 4-0-20-1, ಮಿಷೆಲ್ ಜಾನ್ಸನ್ 4-0-49-2, ಪ್ರಗ್ಯಾನ್ ಓಜಾ 4-0-34-2, ಕೀರನ್ ಪೊಲಾರ್ಡ್ 4-0-35-2

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 44 ರನ್ ಗೆಲುವು

ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್

ಪ್ರತಿಕ್ರಿಯಿಸಿ (+)