ಗುರುವಾರ , ನವೆಂಬರ್ 21, 2019
24 °C

ಮೂರು ಜನ ಅಭ್ಯರ್ಥಿ: 8 ನಾಮಪತ್ರ ಸಲ್ಲಿಕೆ

Published:
Updated:
ಮೂರು ಜನ ಅಭ್ಯರ್ಥಿ: 8 ನಾಮಪತ್ರ ಸಲ್ಲಿಕೆ

ದೇವದುರ್ಗ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಮೂರು ಜನ ಅಭ್ಯರ್ಥಿಗಳಿಂದ 8 ನಾಮಪತ್ರ ಸಲ್ಲಿಕೆಯಾಗಿವೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಂಸದ ಎ.ವೆಂಕಟೇಶ ನಾಯಕ 02, ಕೆಜೆಪಿ ಪಕ್ಷದ ಶಾಂತಗೌಡ 02, ಸಿಪಿಐ (ಎಂ) ಪಕ್ಷದ ಬಸವರಾಜ ನಾಯಕ 01, ಜೆಡಿಯು ಪಕ್ಷದ ಚನ್ನಬಸವ ನಾಯಕ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.13ನಾಮಪತ್ರ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಇದುವರಿಗೂ ಒಟ್ಟು 6ಜನ ಅಭ್ಯರ್ಥಿಗಳಿಂದ 13 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್ ಮತ್ತು ಕೆಜಿಪಿ ಪಕ್ಷಗಳ ಮುಖಂಡರು ಪಕ್ಷದ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)