ಭಾನುವಾರ, ಏಪ್ರಿಲ್ 11, 2021
33 °C

ಮೂರು ದಿನಗಳ ಕಾಲ ನೀರು: ಶಾಸಕರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ಹಗರಿ ನದಿ ದಂಡೆಯ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಲು ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆಯಿಂದ ಮಾರ್ಚ್ 23ರಿಂದ ಮೂರು ದಿನಗಳ ಕಾಲ 120 ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಂಗಳವಾರ ಪತ್ರಿಕೆಗೆ ತಿಳಿಸಿದರು.ಮಾರ್ಚ್ 18, 19ರಂದು ಈ ನದಿಗೆ ಇದೇ ಪ್ರಮಾಣದಲ್ಲಿ ಕಾಲುವೆ ಯಿಂದ ನೀರು ಹರಿಸಲಾಗಿತ್ತು, ಆದರೆ ಕುಡಿಯುವ ನೀರಿನ ಸಮಸ್ಯೆ ನೀಗಲಿಲ್ಲ. ಹೀಗಾಗಿ ಪುನಃ ನದಿಗೆ ನೀರು ಬಿಡಲಾಗುವುದು. ಇದೇ ರೀತಿ ಗುಂಡಿಗನೂರು ಕೆರೆಗೆ 100 ಕ್ಯೂಸೆಕ್ ಮತ್ತು ಗರ್ಜಿಹಳ್ಳಕ್ಕೆ 50 ಕ್ಯೂಸೆಕ್ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಕೈ ಗೊಳ್ಳಲಾಗಿದೆ ಎಂದರು.ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಕೂಡಾ ನೀರಾವರಿ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು ನೀರಾವರಿ ಚೀಫ್ ಇಂಜಿನಿಯರ್ ಒಪ್ಪಿಕೊಂಡಿದ್ದಾರೆ, ನದಿ ಮತ್ತು ಹಳ್ಳ, ಕೆರೆ ದಂಡೆಯ ಜನತೆ ಕುಡಿಯುವ ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.ಏಪ್ರಿಲ್ 15 ರವರೆಗೆ: ಬಾಗವಾಡಿ ಕಾಲುವೆಗೆ ಏಪ್ರಿಲ್ 10 ರವರೆಗೆ ನೀರು ಬಿಡಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ. ರೈತರ ಬೆಳೆ ರಕ್ಷಿಸಲು ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಪರಿಶೀಲಿಸಿ 15 ರವರೆಗೆ ನೀರು ಬಿಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕರು ಭರವಸೆ ನೀಡಿದ್ದಾರೆ. ರೈತರೊಂದಿಗೆ ಚರ್ಚೆ: ಬಾಗವಾಡಿ ಕಾಲುವೆಯ ರೈತರು ಸಮರ್ಪಕ ನೀರಿಗಾಗಿ ಇಂದಿನಿಂದ ಕೈ ಗೊಂಡಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಶಾಸಕರ ಗಮನಸೆಳೆದಾಗ, ರೈತರ ನೀರು ಬೇಡಿಕೆ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಕಲ್ಪಿಸುವೆ ಎಂದರು. ಈ ಕಾಲುವೆಗೆ ನಿಗದಿಪಡಿಸಿದ 145 ಕ್ಯೂಸೆಕ್ ನೀರು ಬಿಡುಗಡೆ ಆಗುತ್ತಿದ್ದು, ಇನ್ನೂ 15 ಕ್ಯೂಸೆಕ್ ನೀರು ಅಧಿಕವಾಗಿ ಬಿಡಲಾಗುತ್ತಿದೆ ಎಂದು ಸೋಮಲಿಂಗಪ್ಪ ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಚನ್ನನಗೌಡ, ಎಪಿ ಎಂಸಿ ಮಾಜಿ ಅಧ್ಯಕ್ಷ ಕೆ.ನಾಗೇಶ, ಉಡೇಗೊಳ ಖಾಜಪ್ಪಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.