ಮೂರು ಮಕ್ಕಳ ಹೆತ್ತ ತಾಯಿ!

7

ಮೂರು ಮಕ್ಕಳ ಹೆತ್ತ ತಾಯಿ!

Published:
Updated:

ಲಿಂಗಸುಗೂರ: ಸ್ಥಳೀಯ ರಾಯಚೂರು ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ಹೆರಿಗೆ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯರಾತ್ರಿ ಮಹಿಳೆಯೋರ್ವಳು 2 ಗಂಡು, 1ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ.



ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದ (ಕಕ್ಕೇರಿ ತವರು ಮನೆ) ನಿಂಗಮ್ಮ ಮಲ್ಲಣ್ಣ ಕಿಲ್ಲೆದಾರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಎರಡು ಗಂಡು ಕೂಸುಗಳು 2.25 ಮತ್ತು 2.15ಕೆಜಿ ಇದ್ದು ಹೆಣ್ಣು ಕೂಸು 1.75ಕೆಜಿ ತೂಕ ಹೊಂದಿವೆ.



ತಾಯಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ ಡಾ. ವಿಜಯಾ ಹೇಮಂತ ರಕ್ತ ಹೀನತೆಗೆ ಎರಡು ಬಾಟಲ ರಕ್ತ ನೀಡಿದ್ದಾರೆ. ರಕ್ತ ನೀಡಿದ

ಬೆನ್ನ ಹಿಂದೆಯೆ ಹೆರಿಗೆ ಬೇನೆ ಕಾಣಿಸಿಕೊಂಡು ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಡಾ. ವಿಜಯ ಪಟ್ಟ ಶ್ರಮವನ್ನು ಕುಟುಂಬ ವರ್ಗ ಶ್ಲಾಘಿ ಸಿತು.



ಮಕ್ಕಳ ತಜ್ಞ ಡಾ. ಡಿ.ಎಚ್. ಕಡದರಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮದ ಉಸ್ತುವಾರಿ ನಿರ್ವಹಿಸುತ್ತಿದ್ದು ಮೂರು ಮಕ್ಕಳು ಆರೋಗ್ಯವಾಗಿದ್ದಾರೆ. ಹೆಣ್ಣು ಕೂಸು ತೂಕದಲ್ಲಿ ಕಡಿಮೆ ಇದ್ದು ಚಿಕಿತ್ಸೆಯಿಂದ ಸರಿ ಹೋಗುತ್ತದೆ ಎಂದು ತಿಳಿಸಿದರು.



ಶ್ರೀಲಕ್ಷ್ಮಿ ಆಸ್ಪತ್ರೆ ವೈದ್ಯೆ ಡಾ. ವಿಜಯಾ ಹೇಮಂತ ಮಾತನಾಡಿ, ತಾಯಿ ರಕ್ತ ಹೀನತೆ ಮಧ್ಯೆಯು ಹೆರಿಗೆ ಮಾಡಿಸುವುದು ಕಷ್ಟದ ಕೆಲಸ. ಮೂರು ಮಕ್ಕಳ ಹೆರಿಗೆ ತಮಗೆ ಹೊಸತು. ತಾಯಿ ಮತ್ತು ಕೂಸುಗಳು ಆರೋಗ್ಯವಾಗಿರುವ ಬಗ್ಗೆ ಹರ್ಷ ಹಂಚಿಕೊಂಡರು.

ಡಾ. ಹೇಮಂತ ಹಾಗೂ ಸಿಬ್ಬಂದಿ ವರ್ಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry