ಮೂರು ವರ್ಷದ ಸೆರೆವಾಸಕ್ಕಾಗಿ 28 ವರ್ಷ ವಿಚಾರಣೆ!

7

ಮೂರು ವರ್ಷದ ಸೆರೆವಾಸಕ್ಕಾಗಿ 28 ವರ್ಷ ವಿಚಾರಣೆ!

Published:
Updated:

ನವದೆಹಲಿ (ಪಿಟಿಐ): ನಕಲಿ ಔಷಧಿ ಉತ್ಪಾದನೆ ಮತ್ತು ಮಾರಾಟದ ಅಪರಾಧಕ್ಕಾಗಿ ದೆಹಲಿ ನ್ಯಾಯಾಲಯದಿಂದ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವೈದ್ಯನೊಬ್ಬ ವಿಚಾರಣೆ ಎದುರಿಸಿದ್ದು ಬರೋಬ್ಬರಿ 28 ವರ್ಷ. ಸನ್ನಡತೆ ಆಧಾರದ ಮೇಲೆ ಕೊನೆಗೂ ಆತನನ್ನು ಬಿಡುಗಡೆ ಮಾಡಲಾಗಿದೆ.

ಡಾ. ಎಚ್. ಆರ್. ಕನ್ವಾಲ್ (81) ಬಿಡುಗಡೆ ಹೊಂದಿದ ಅಪರಾಧಿ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಸವಿತಾ ರಾವ್ ಅವರು ವೈದ್ಯನ ಮೂರು ವರ್ಷದ ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿ ಆತನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಆತ ಮಾಡಿದ ಅಪರಾಧಗಳಿಂದ ಸಾಮಾಜಿಕ ಮತ್ತು ಆರ್ಥಿಕವಾಗಿಯೂ ದುಷ್ಪರಿಣಾಮವಾಗಿದೆ. ಆದರೆ ಆತನನ್ನು ಜೈಲಿಗೆ ಕಳುಹಿಸುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ವೈದ್ಯನನ್ನು ಬಿಡುಗಡೆ ಮಾಡುವಾಗ ನ್ಯಾಯಾಲಯ ಹೇಳಿದೆ.

ಆತ 28 ವರ್ಷಗಳ ಕಾಲ ವಿಚಾರಣೆ ಎದುರಿಸಿದ ಅವಧಿಯಲ್ಲಿ ಆತನ 28 ವರ್ಷದ ಏಕೈಕ ಮಗನು ಕೊಲೆಯಾಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry