ಭಾನುವಾರ, ಸೆಪ್ಟೆಂಬರ್ 22, 2019
22 °C

ಮೂರೂರು ಗುಡ್ಡದಲ್ಲಿತ್ಯಾಜ್ಯ ಘಟಕಕ್ಕೆ ವಿರೋಧ

Published:
Updated:

ಕುಮಟಾ: ಸ್ಥಳಿಯರ ವಿರೋಧದ ನಡುವೆಯೂ ಕುಮಟಾ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ಮೂರೂರು ಗುಡ್ಡದಲ್ಲಿ ಸ್ಥಾಪಿಸ ಹೊರಟಿರುವ ಹಟವಾದಿತನ ಜನರ ಬದುಕುವ ಹಕ್ಕು ಕಸಿದುಕೊಳ್ಳು ವಂತಾಗಿದ್ದು, ಅದನ್ನು  ತಡೆಯಲು  ಸ್ಥಳೀಯರು ಎಂಥ ಹೋರಾಟ ಕ್ಕಾದರೂ ಸಿದ್ಧರಿದ್ದಾರೆ ಎಂದು ಮೂರೂರು ಗ್ರಾಮ ಹಿತರಕ್ಷಣಾ ಸಮಿತಿ ಸದಸ್ಯರು ತಿಳಿಸಿದರು.ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ, ದೀವಗಿ ಪಂಚಾಯಿತಿ ಅಧ್ಯಕ್ಷ ಹೇಮಂತ ಗಾಂವ್ಕರ, `ಸುಮಾರು 8 ಕೋಟಿ ರೂಪಾಯಿಯ ಬೃಹತ್ ಯೋಜನೆ ಯನ್ನು ಅನುಷ್ಠಾನ ಗೊಳಿಸುವ ಮೊದಲು ಪುರಸಭೆಯವರು ಸ್ಥಳೀಯ ಪಂಚಾಯಿತಿಯ ಅನುಮತಿ ಪಡೆದಿಲ್ಲ ಎಂದು ದೂರಿದರು.ಸುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾದ ಉದ್ದೇಶಿತ ಪ್ರದೇಶದಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆಯಾದರೆ ಅಘನಾಶಿನಿ ನದಿ ನೀರು ಮೊದಲು ಕಲು ಷಿತವಾಗುತ್ತದೆ. ಇಂಥ ಯೋಜನೆಗೆ ಖಂಡಿತಾ ಅವಕಾಶ ನೀಡುವುದಿಲ್ಲ~ ಎಂದರು. ನಿವೃತ್ತ ಭೂಗರ್ಭ ಇಲಾಖೆ ಅಧಿಕಾರಿ ಎಂ.ಆರ್. ಹೆಗಡೆ, ` ಇದೇ ಮಾದರಿಯ ಘನತ್ಯಾಜ್ಯ ಘಟಕ ಭಟ್ಕಳದಲ್ಲೂ ಇದೆ. ಅದು ಸುತ್ತಲಿನ ಜನರಿಗೆ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಜನರ ಮನ ವೊಲಿಸಲು ಅಧಿಕಾರಿಗಳು ತಾವು ಉನ್ನತ ತಂತ್ರಜ್ಞಾನ ಅಳವಡಿಸಿ ಘನ ತ್ಯಾಜ್ಯ ಘಟಕ ಸ್ಥಾಪಿಸುವುದರಿಂದ ಯಾವುದೇ ರೀತಿಯ ಪರಿಸರ ಮಾಲಿನ್ಯ ಉಂಟಾಗದು ಎನ್ನುವ ತಪ್ಪು ಮಾಹಿತಿ ನೀಡುತ್ತಿದ್ದಾರೆ.

 

ಘನ ತ್ಯಾಜ್ಯ ಘಟಕ ಅಷ್ಟೊಂದು ಸುರಕ್ಷಿತ ವಾಗಿದ್ದರೆ ಪಟ್ಟಣದ ನಡುವೆ ಅದನ್ನು ಸ್ಥಾಪಿಸಬಹುದಾಗಿದ್ದು, ಇದರಿಂದ ಕಸಗಳನ್ನು ಅಷ್ಟು ದೂರ ಸಾಗಾಟ ಮಾಡುವ ವೆಚ್ಚ, ಸಮಯ ಉಳಿ ಯುತ್ತದೆ~ ಎಂದರು.

ಟಿ.ಪಿ. ಹೆಗಡೆ, ಶಾಸ್ತ್ರಿ,  ಹಾಗೂ ವಿ.ಆರ್. ಹೆಗಡೆ, `ಘನತ್ಯಾಜ್ಯ ಘಟಕ  ಸರ್ವೆ ನಂಬರ್108 ಎ1ಎ1ಎ1ಎ1ಎ1 ದರ ಸುಮಾರು 895ಎಕರೆ ಜಾಗದ ಅಚ್ಯುತ್ ಪಂಡಿತ ಆಸ್ಪತ್ರೆ ಕಾಂಪೌಂಡ್ ಕೆಳಗಿ ಚಿಗೊಳ್ಳಿ ಬಳಿ ಗುರುತಿಸಲಾಗಿತ್ತು. ಮೂರೂರು ಗುಡ್ಡದ ಬದಲು ಅಲ್ಲಯೇ ಸ್ಥಾಪಿಸುವುದು ಸೂಕ್ತ ವಾಗಿದೆ~ ಎಂದರು.

Post Comments (+)