ಸೋಮವಾರ, ಮೇ 10, 2021
21 °C

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಸಿದ್ದರಾಮ ಹಿರೇಮಠ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ ತಾಲ್ಲೂಕಿನ ಆಲೂರು ಎಂದಾಕ್ಷಣ ನೆನಪಾಗುವುದು ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೋ.ಚನ್ನಬಸಪ್ಪನವರು. ಇದೀಗ ಆ ಗ್ರಾಮಕ್ಕೆ ಮತ್ತೊಂದು ಗರಿಯನ್ನು ತೊಡಿಸಲು ಸದಾ ಸಿದ್ಧನಾಗಿರುವ ವ್ಯಕ್ತಿ ಅಂಗವಿಕಲ ಪ್ರತಿಭೆ ಕೆ.ಜಿ.ಪ್ರಭು. ದೈಹಿಕವಾಗಿ ಕುಳ್ಳಗಿರುವ ಪ್ರಭು ಆಗಸ್ಟ್ 3ರಂದು ಅಮೆರಿಕಾದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಭಾರತ ತಂಡದಿಂದ(ಕುಬ್ಜರ ವಿಭಾಗ) ಆಯ್ಕೆಯಾಗಿದ್ದಾರೆ.ಪ್ರಭು ಅಂತರರಾಷ್ಟ್ರೀಯ ಮಟ್ಟಕ್ಕೆ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. 2010ರ ನವೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿ ಚಿನ್ನದ ಪದಕ ಪಡೆದಿದ್ದಾರೆ. ಇಷ್ಟೇ ಅಲ್ಲದೆ 2009ರ ಆಗಸ್ಟ್‌ನ್ಲ್ಲಲಿ ತಮಿಳುನಾಡಿನ ಮಧುರೈನಲ್ಲಿ ನಡೆದ ರಾಷ್ಟ್ರಮಟ್ಟದ ಅಖಿಲ ಭಾರತ ಸೂಪರ್ ಸಿಕ್ಸ್ ಸ್ಪರ್ಧೆಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನ್ಲ್ಲಲಿ ಚಿನ್ನದ ಪದಕ. 2010ರ್ಲ್ಲಲಿ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ. 2011ರ ಜುಲೈನಲ್ಲಿ ಬಳ್ಳಾರಿಯಲ್ಲಿ ನಡೆದ ನ್ಯಾಷನಲ್ ಓಪನ್ ಪ್ಯಾರಾಗೇಮ್ಸ ಸ್ಪರ್ಧೆಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನ್ಲ್ಲಲಿ ಚಿನ್ನದ ಪದಕ. 2012ರ ಫೆಬ್ರವರಿಯಲ್ಲಿ ಒಡಿಸ್ಸಾದಲ್ಲಿ ನಡೆದ 8ನೇ ಆಲ್ ಇಂಡಿಯಾ ಸೂಪರ್ ಸಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನ್ಲ್ಲಲಿ ಚಿನ್ನದ ಪದಕ, ಹೀಗೆ ಸಾಲು ಸಾಲು ಚಿನ್ನ, ಬೆಳ್ಳಿ ಪದಕಗಳನ್ನು  ಮುಡಿಗೇರಿಸಿಕೊಂಡಿರುವ ಪ್ರಭು ಅಪೂರ್ವ ಪ್ರತಿಭಾವಂತ.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಪ್ರಭುವಿನ ಕ್ರೀಡಾ ಸಾಧನೆ. ನೋಡಲು ಕೇವಲ 3 ಅಡಿಯಷ್ಟು ಎತ್ತರ ಇರುವ ವ್ಯಕ್ತಿಯೊಬ್ಬ ಹಿರಿಯ ಸಾಧನೆಗೈದು ಸಾಕಷ್ಟು ಬಂಗಾರದ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಮೆರೆದಿದ್ದಾರೆ. ಮನೆಯಲ್ಲಿ ಬಡತನ, ದೈಹಿಕ ನ್ಯೂನತೆ ಇದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭು ಬೆಳೆದಿರುವುದು ಕಡಿಮೆ ಸಾಧನೆಯೇನಲ್ಲ.ಅಮೆರಿಕಾದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಪ್ರಭುವಿಗಿರುವ ತೊಂದರೆಯೆಂದರೆ ಆರ್ಥಿಕ ದುಸ್ಥಿತಿ. ಯಾವುದೇ ಕ್ರೀಡಾ ಕೂಟದಲ್ಲಿ ಆಯ್ಕೆಯಾದರೂ ಅಲ್ಲಿಗೆ ತೆರಳಲು ಬಿಡಿಗಾಸು ಇಲ್ಲದೆ ಪರಿತಪಿಸುವ ಪರಿಸ್ಥಿತಿ ಸದಾ ಕಾಡುತ್ತದೆ. ಪ್ರತಿ ಬಾರಿಯೂ ಗೆಳೆಯರ, ಸಂಘ-ಸಂಸ್ಥೆಗಳ ನೆರವು ಸಿಗುವುದರಿಂದ ಧೈರ್ಯದಿಂದಲೇ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಷ್ಟೆಲ್ಲ ಸಾಧನೆಗೈದ ಕ್ರೀಡಾಪಟುವಿಗೆ ಸರ್ಕಾರದ ನೆರವು, ಪ್ರೋತ್ಸಾಹ ಇದುವರೆಗೂ ಸಿಗದಿರುವುದು ದುರಂತ.ಇದುವರೆಗೆ ಕುದುರೆಮುಖದ ಆಫೀಸರ್ಸ್ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಭು, ಅಲ್ಲಿನ ಕಂಪೆನಿ ಮುಚ್ಚಿದ್ದರಿಂದ ಕ್ಲಬ್ ಸ್ಥಗಿತಗೊಂಡಿದೆ. ಅಂದಿನಿಂದ ಕೆಲಸ ಇಲ್ಲದೆ ಪ್ರಭುವಿಗೆ ಆರ್ಥಿಕ ಸಂಕಷ್ಟ ತಲೆದೋರಿದೆ. ಕುಟುಂಬಕ್ಕೆ ಹೊರೆಯಾಗುತ್ತೇನೆಂಬ ಭಾವನೆಯಿಂದ ದುಡಿಯಲು ಉತ್ಸಾವಿದ್ದರೂ ಉದ್ಯೋಗದ ಕನಸು ಕಮರಿದೆ. ಆದರೂ ಜೊತೆಯ್ಲ್ಲಲಿರುವ ಕ್ರೀಡೆ  ಧೈರ್ಯ ತುಂಬಿದೆ. `ಆರ್ಥಿಕ ಸಂಕಷ್ಟದಲ್ಲಿ ಬೇಯುತ್ತಿರುವ ತನಗೆ ಸರ್ಕಾರದ ನೆರವು ದೊರೆತರೆ ಸ್ವಾವಲಂಬಿ ಜೀವನಕ್ಕೆ ದಾರಿಯಾಗಿ ಕುಟುಂಬ ನಿರ್ವಹಣೆಗೆ ಸಹಕಾರಿಯಾದೀತು' ಎಂದು ಕ್ರೀಡಾ ಸಾಧಕ ಪ್ರಭು ನೋವಿನಿಂದ ಹೇಳಿಕೊಳ್ಳುತ್ತಾರೆ. ಈಗಲಾದರೂ ಸರ್ಕಾರ ಪ್ರಭುವಿನ ನೆರವಿಗೆ ಧಾವಿಸಬೇಕಿದೆ.  ಕ್ರೀಡಾಸಕ್ತಿ ಕಮರುವ ಮುನ್ನವೇ ಪ್ರೋತ್ಸಾಹಿಸುವ ಅಗತ್ಯವಿದೆ. ಪ್ರಭುವಿನೊಂದಿಗೆ ಮಾತನಾಡಿ, ಸಹಾಯ ಹಸ್ತ ನೀಡಬಯಸುವವರು ಸಂಪರ್ಕಿಸಬೇಕಾದ ಮೊಬೈಲ್ ಸಂ.7829890971.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.