ಮೂರ್ತಿ ಭಗ್ನಕ್ಕೆ ಯತ್ನ: ತನಿಖೆ

7

ಮೂರ್ತಿ ಭಗ್ನಕ್ಕೆ ಯತ್ನ: ತನಿಖೆ

Published:
Updated:

ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಬೆಳಲಖಂಡ ಗ್ರಾಮದ ಸನಿಹದಲ್ಲಿರುವ ಬೃಹತ್ ಮರ ವೊಂದರ ನೆರಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾಸತಿ, ಜಟಕ, ಹುಲಿಕೀರ್ತಿ ದೇವರ ಮೂರ್ತಿ ಕೆಡವಿ ಭಗ್ನ ಗೊಳಿಸಲು ಯತ್ನಿಸಿದ ಘಟನೆ ಭಾನು ವಾರ ನಡೆದಿದೆ.ಇಲ್ಲಿನ ಬೆಳಲಖಂಡ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 61ರಲ್ಲಿ ನೂರಾರು ವರ್ಷಗಳ ಹಿಂದೆ ಬೃಹತ್ ಮರವೊಂದರ ಬುಡದಲ್ಲಿ ದೇವರ ಮರದ ಮೂರ್ತಿಗಳನ್ನು ಪ್ರತಿ ಷ್ಠಾಪಿಸಲಾಗಿದ್ದ ಈ ಸ್ಥಳಕ್ಕೆ ಬೇಟೆ ವೀರ ದೇವಸ್ಥಾನವೆಂದು ಸ್ಥಳೀಯರು ಕರೆ ಯುತ್ತಾರೆ. ಇಲ್ಲಿ ಜಟಕ,ಮಹಾಸತಿ ಮತ್ತು ಹುಲಿಕೀರ್ತಿ ದೇವರನ್ನೊಳ ಗೊಂಡ 10ಕ್ಕೂ ಹೆಚ್ಚು ಮರದ ಮೂರ್ತಿಗಳಿವೆ. ಈ ಭಾಗದ ಗೊಂಡ ಸಮಾಜದ ಆರಾಧ್ಯ ದೇವರುಗಳು ಆದ ಇಲ್ಲಿ ಸಂಕ್ರಾತಿ ಸೇರಿದಂತೆ ವರ್ಷದ ಮೂರು ದಿನ ಕೋಳಿ ಬಲಿ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ

ನಡೆಯುತ್ತದೆ.ಅದರಲ್ಲಿ ಜಟಕನ ಮೂರ್ತಿಗಳನ್ನು ಹೊರತುಪಡಿಸಿ ಉಳಿದ ಮೂರ್ತಿಗಳನ್ನು ಕೆಡವಲಾ ಗಿದೆ.

ಇತರೇ ದಿನಗಳಲ್ಲಿ ಅಡಿಕೆ, ಸಿಂಗಾರ, ಹೂವಿನ ಪೂಜೆಗಳು ಸಹ ನಡೆಯು ತ್ತದೆ. ಮೂರ್ತಿಗಳಿರುವ ಸುತ್ತಲ್ಲೂ ಕಲ್ಲಿನ ಆವರಣ ಗೋಡೆಯನ್ನು ಕಟ್ಟಲಾಗಿದೆ. ಆದರೆ ಮೂರ್ತಿ ಗಳಿ ರುವ ಸ್ಥಳದ ದಾರಿಯಲ್ಲಿ ಜನರ ಓಡಾಟ ವಿರಳ.ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದಾರಿಯಲ್ಲಿ ಸಾಗುತ್ತಿದ್ದ ಗೊಂಡ ಸಮಾಜದ ವ್ಯಕ್ತಿ ಯೋರ್ವರು ಮೂರ್ತಿಗಳನ್ನು ಕೆಡವಿ ಹಾಕಿರುವುದನ್ನು ಗಮನಿಸಿ ಊರಿನ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ ತಕ್ಷಣ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಘಟನೆಯನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು ಎಂದು ಮುಟ್ಟಳ್ಳಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ದೇವಯ್ಯ ನಾಯ್ಕ ತಿಳಿಸಿದರು. ಮೂರ್ತಿಗಳನ್ನು ಉದ್ದೇಶ ಪೂರ್ವಕ ವಾಗೇ ಕೆಡವಲಾಗಿದೆ ಎಂದೂ ದೇವಯ್ಯ ನಾಯ್ಕ ಆರೋಪಿಸಿದ್ದಾರೆ.ಸ್ಥಳಕ್ಕೆ ಬಂದ ಸಿ.ಪಿ.ಐ.ಶಿವಪ್ರಕಾಶ ನಾಯ್ಕ, ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು. ಮೂರ್ತಿ ಗಳಿರುವ ಸ್ಥಳದ ಸುತ್ತಮುತ್ತ ಮಾನಸಿಕ ಸ್ಥಿಮಿತ ಕಳೆದುಕೊಂಡ ಹುಚ್ಚನೋರ್ವ ಓಡಾಡುತ್ತಿರುವ ಬಗ್ಗೆ ಮಾಹಿತಿಯಿದ್ದು, ಹುಚ್ಚಿನ ಗುಂಗಿ ನಲ್ಲಿ ಮೂರ್ತಿಗಳನ್ನು ಆತನೇ ಕೆಡವಿ ರಬಹುದು ಎಂಬ ಸಂಶಯವಿದೆ. ಇದರ ಹೊರತಾಗಿ ಕಿಡಿಗೇಡಿಗಳ ಕೃತ್ಯವೂ ಇರಬಹುದು. ತನಿಖೆಯನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ ರನ್ನು ನಿಯೋಜಿಸಲಾಗಿದೆ ಎಂದು ಸಿ.ಪಿ.ಐ ಶಿವಪ್ರಕಾಶ ನಾಯ್ಕ `ಪ್ರಜಾ ವಾಣಿ~ಗೆ ತಿಳಿಸಿದ್ದಾರೆ.ಘಟನೆಯಿಂದ ಬೆಳಲಖಂಡ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry