ಶುಕ್ರವಾರ, ಜೂನ್ 18, 2021
28 °C

ಮೂರ್ನಾಡು: ಗಬ್ಬೆದ್ದು ನಾರುತ್ತಿರುವ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಸಮೀಪದ ಮೂರ್ನಾಡಿನಲ್ಲಿ ಗುರುವಾರ ವಾರದ ಸಂತೆಯ ದಿನ. ಸುತ್ತಮುತ್ತಲ ಗ್ರಾಮಗಳಿಂದ ಸಂತೆಗೆ ಬರುವ ಮಂದಿ ಇಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಇದೆ.ಇಲ್ಲಿಯ ಮಾರುಕಟ್ಟೆ ಆವರಣ, ಸಾರ್ವಜನಿಕ ಶೌಚಾಲಯಗಳು ಕಸದ ರಾಶಿಯಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಪಟ್ಟಣದ ನೈರ್ಮಲ್ಯದತ್ತ ಗಮನಹರಿಸದ ಗ್ರಾಮ ಪಂಚಾಯಿತಿ ತೀರಾ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂಬುದು ಸಾರ್ವಜನಿಕರ ಆರೋಪ. ಇಲ್ಲಿಯ ಮಾರುಕಟ್ಟೆಯ ಆವರಣ, ಸಾರ್ವಜನಿಕ ಶೌಚಾಲಯ, ಮಾಂಸದ ಅಂಗಡಿಗಳ ಸುತ್ತಲೂ ಕಸ-ತ್ಯಾಜ್ಯ, ಪ್ಲಾಸ್ಟಿಕ್‌ಗಳ ರಾಶಿ ತುಂಬಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಸ್ವಚ್ಛತೆಯಿಲ್ಲದ ಶೌಚಾಲಯದಲ್ಲಿ ನೀರಿನ ಸೌಲಭ್ಯವೂ ಇಲ್ಲ. ಶೌಚಾಲಯದ ಹಿಂಭಾಗ ದುರ್ವಾಸನೆಯಿಂದ ಕೂಡಿದ್ದು, ಸುತ್ತಲಿನವರಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ. ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.ಮೂರ್ನಾಡಿನಲ್ಲಿ ಸಂಗ್ರಹಿಸುವ ಕಸವನ್ನು ತಂದು ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ. ಸೂಕ್ತವಾಗಿ ಕಸ ವಿಲೇವಾರಿಯಾಗದೆ ಸಮಸ್ಯೆ ಕಾಡುತ್ತಿದೆ. ಕಸ ವಿಲೇವಾರಿ ಮಾಡಲು ಜಾಗದ ಕೊರತೆ ಇದೆ ಎಂದು ಸಿದ್ಧ ಉತ್ತರ ನೀಡುವ ಗ್ರಾಮ ಪಂಚಾಯಿತಿ ಸ್ವಚ್ಛತೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.ಶೌಚಾಲಯದ ನಿರ್ವಹಣೆ,  ಪಟ್ಟಣದ ನೈರ್ಮಲ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.