ಭಾನುವಾರ, ಮೇ 16, 2021
23 °C

ಮೂಲದಾಖಲೆಗಳ ಪರಿಶೀಲನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಸೇರಲು ಕಾತುರದಿಂದ ಕಾಯುತ್ತಿದ್ದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ನಗರದ  ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆರಂಭವಾಯಿತು.ಮೊದಲ ದಿನ 1ರಿಂದ 2000 ರ‌್ಯಾಂಕ್ ಪಡೆದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳ ಮೂಲ ದಾಖಲೆ ಪರಿಶೀಲಿಸಲಾಯಿತು. ಆ ಬಳಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋಡ್, ಪಾಸ್‌ವರ್ಡ್ ಮತ್ತು ಪರಿಶೀಲನಾ ಪ್ರಮಾಣಪತ್ರ ನೀಡಲಾಯಿತು.ವೈದ್ಯಕೀಯ ವಿಭಾಗದಲ್ಲಿ 3ನೇ ರ‌್ಯಾಂಕ್ ಪಡೆದಿರುವ ಚಾಮರಾಜನಗರ ಜಿಲ್ಲೆ, ಮಲೆಯೂರಿನ ಬಿ. ವಿವೇಕ್ ಅವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೋಡೆಲ್ ಅಧಿಕಾರಿ ಆನಂದರಾಜ್, ಸಹಾಯಕ ನೋಡಲ್ ಅಧಿಕಾರಿ ಆರ್.ಪಿ. ನಾಗೇಂದ್ರಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ. ಪುಟ್ಟು, ಸಂಸ್ಥೆಯ ಆಡಳಿತಾಧಿಕಾರಿ ನಾರಾಯಣರಾವ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಅವರು ಪರಿಶೀಲನಾ ಪ್ರಮಾಣಪತ್ರ ನೀಡಿದರು.ಬೆಳಿಗ್ಗೆ 8 ಗಂಟೆಗೆ ಆರಂಭವಾದ ಹೆಸರು ನೋಂದಣಿ ಮತ್ತು ದಾಖಲೆಗಳ ಪರಿಶೀಲನೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಬೆಳಿಗ್ಗೆ ಸರ್ವರ್ ಕೈಕೊಟ್ಟಿದ್ದರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು. ಉಚಿತ ಮಾಹಿತಿ ಪುಸ್ತಕ ಮತ್ತು ಸಿ.ಡಿ ಮೊದಲ ದಿನ ಲಭ್ಯವಾಗದ್ದರಿಂದ ಪೋಷಕರು, ವಿದ್ಯಾರ್ಥಿಗಳು ಪರದಾಡಿದರು.ಜೂನ್ 6ರಂದು ಬೆಳಿಗ್ಗೆ 9ರಿಂದ 11, 11.15ರಿಂದ ಮಧ್ಯಾಹ್ನ 1.15, 2ರಿಂದ ಸಂಜೆ 4 ಹಾಗೂ 4.15ರಿಂದ 6.15ರವರೆಗೆ ರ‌್ಯಾಂಕ್ ಸಂಖ್ಯೆ 2,001ರಿಂದ 5,000ರವರೆಗೆ ಮೂಲದಾಖಲೆಗಳ ಪರಿಶೀಲನೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.