ಶನಿವಾರ, ಮೇ 8, 2021
19 °C
ಸಿಇಟಿ ಕೌನ್ಸೆಲಿಂಗ್

ಮೂಲದಾಖಲೆ ಪರಿಶೀಲನೆ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಕಾತರರಾಗಿರುವ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಇಂದಿನಿಂದ ಆರಂಭವಾಗಲಿದೆ.ನಗರದ ಗೋಕುಲಂ 3ನೇ ಹಂತದಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 5ರಿಂದ 23ರವರೆಗೆ ಮೂಲದಾಖಲೆಗಳ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ ಕಾಲೇಜು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ನೆರವಿಗೆ ಸಹಾಯವಾಣಿ ಆರಂಭಿಸಿದೆ.ಮೊದಲ ದಿನ 1ರಿಂದ 2,000 ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಆನ್‌ಲೈನ್ ಕೋಡ್ ಮತ್ತು ಪಾಸ್‌ವರ್ಡ್, ಪರಿಶೀಲನಾ ಪ್ರಮಾಣಪತ್ರ, ಮಾಹಿತಿ ಪುಸ್ತಕ ಹಾಗೂ ಸಿ.ಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಬೆಳಿಗ್ಗೆ 9ರಿಂದ 11, 11.15ರಿಂದ 1.15, 2ರಿಂದ 4 ಹಾಗೂ 4.15ರಿಂದ 6.15ರವರೆಗೆ ನಾಲ್ಕು ಅವಧಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.ಈ ಮೊದಲು ನಿಗದಿಪಡಿಸಿದ್ದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್ 5ರಿಂದ ಸೀಟು ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಆದ್ಯತೆ ಗುರುತಿಸಿದ (ಆಪ್ಶನ್ ಎಂಟ್ರಿ) ನಂತರ ಅಣಕು ಸೀಟು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಂತಿಮವಾಗಿ ಸೀಟನ್ನು ಖಚಿತಪಡಿಸಲಾಗುತ್ತದೆ. ಸೀಟು ಪಡೆದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಪ್ರವೇಶ ಶುಲ್ಕ ಭರಿಸಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.