ಬುಧವಾರ, ಮೇ 18, 2022
23 °C

ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಸಹ್ಯಾದ್ರಿ ನಗರ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ 172 ಬಡ ಕುಟುಂಬಗಳಿಗೆ  ಮನೆ ನಿರ್ಮಿಸಿಕೊಡಲಾಗಿದ್ದು, ಸದರಿ ವಸತಿ ಪ್ರದೇಶದಲ್ಲಿ ರಸ್ತೆ, ದೀಪದ ವ್ಯವಸ್ಥೆ ಇರುವುದಿಲ್ಲ. ಕಾರಣ ಮೂಲಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಅಲ್ಲಿನ ರೆಡ್ ಗಾರ್ಡ್ ಸಂಘಟನೆಯ ಅಧ್ಯಕ್ಷ ಡಿ. ಶಂಕರಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಸದರಿ ಪ್ರದೇಶದಲ್ಲಿ ಮನೆಗಳನ್ನು ಪಡೆದುಕೊಂಡ ನಾಗರಿಕರು ಆಗಲೇ 2-3 ಕಂತುಗಳನ್ನು ಕಟ್ಟಿದ್ದಾರೆ. ಆದರೆ ಮೂಲಭೂತ ಸೌಲಭ್ಯ ಇಲ್ಲದ ಕಾರಣಕ್ಕೆ ಎಲ್ಲ ಕುಟುಂಬಗಳು ಅಲ್ಲಿ ವಾಸಿಸುತ್ತಿಲ್ಲ. ಪ್ರಸ್ತುತ ಏಳು ದಿನಗಳ ಒಳಗಾಗಿ ಎಲ್ಲ ಕಂತು ಪಾವತಿಸುವಂತೆ ಪಾಲಿಕೆಯಿಂದ ನೊಟೀಸ್ ನೀಡಲಾಗಿದೆ.ಆದರೆ  ಮೂಲಸೌಲಭ್ಯ ನೀಡದೇ ನೊಟೀಸ್ ನೀಡಿದ ಕ್ರಮ ಸರಿಯಲ್ಲ. ಮುಂದಿನ 7 ದಿನಗಳ ಒಳಗೆ ಅವಶ್ಯಕ ಸೌಲಭ್ಯ ಒದಗಿಸಿಕೊಟ್ಟರೆ ಸದರಿ ಪ್ರದೇಶದ ಮನೆಗಳಿಗೆ ತೆರಳುತ್ತೇವೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಮೋಹನ ಪವಾರ, ರಮಾಕಾಂತ ಶಟವಾಣಿ, ರವಿ ನಾಯ್ಕ, ಯುವರಾಜ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.