`ಮೂಲಸೌಕರ್ಯಕ್ಕೆ ಆದ್ಯತೆ'

7

`ಮೂಲಸೌಕರ್ಯಕ್ಕೆ ಆದ್ಯತೆ'

Published:
Updated:

ನವದೆಹಲಿ(ಪಿಟಿಐ): `ಜಾಗತಿಕ ಆರ್ಥಿಕ ಅಸ್ಥಿರತೆ ಇನ್ನೆರಡು ವರ್ಷಗಳ ಕಾಲ ಮುಂದುವರೆಯಲಿದ್ದು, ಮೂಲಸೌಕರ್ಯ ಮತ್ತು ಸಾಂಸ್ಥಿಕ ವಲಯಗಳಲ್ಲಿ ಹೂಡಿಕೆ ಮಾಡಲು ಭಾರತಕ್ಕೆ ಇದು ಉತ್ತಮ ಸಮಯ' ಎಂದು ವಿಶ್ವ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ.ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಿದ ಅವರು, `ಜಾಗತಿಕ ಆರ್ಥಿಕತೆಯು ಇನ್ನೆರಡು ವರ್ಷಗಳ ಕಾಲ ಕಠಿಣ ಹಾದಿಯನ್ನು ಕ್ರಮಿಸಬೇಕಿದೆ. ಈಗಾಗಲೇ ಚೀನಾ ಸೇರಿದಂತೆ ಹಲವು ದೇಶಗಳು ಮೂಲಸೌಕರ್ಯ ವಲಯದಲ್ಲಿ ಭಾರಿ ಹೂಡಿಕೆ ಮಾಡಿವೆ. ಇದರ  ಫಲಗಳು ಜನಸಾಮಾನ್ಯರನ್ನೂ ತಲುಪುತ್ತಿವೆ. ಆದರೆ, ಭಾರತ ಈ ಕ್ಷೇತ್ರದಲ್ಲಿ ಹಿನ್ನಡೆ ಅನುಭಿಸುತ್ತಿದೆ' ಎಂದರು.ಕೇಂದ್ರ ಯೋಜನಾ ಆಯೋಗ 12ನೇ ಪಂಚವಾರ್ಷಿಕ ಯೋಜನೆ(2012-17) ಅವಧಿಯಲ್ಲಿ ಮೂಲಸೌಕರ್ಯ ವಲಯದಲ್ಲಿ 1000 ಕೋಟಿಯಷ್ಟು ಹೂಡಿಕೆ ನಿಗದಿಪಡಿಸಿರುವುದು ಉತ್ತಮ   ನಿರ್ಧಾರವಾಗಿದೆ ಎಂದರು.ಭಾರತದ ಆರ್ಥಿಕತೆ 1991ರಿಂದ ಮಹತ್ವದ ಪ್ರಗತಿ ಕಂಡಿದೆ. ಆದರೆ, ಇದು ಸಮಾಜದ ಎಲ್ಲ ರಂಗವನ್ನೂ ಒಳಗೊಂಡ ಸುಸ್ಥಿರ ಪ್ರಗತಿ ಅಲ್ಲ. ಆರ್ಥಿಕ ಫಲಗಳು ಎಲ್ಲರಿಗೂ ಲಭಿಸಬೇಕು ಎಂದು ವಿಶ್ಲೇಷಿಸಿದರು.ವಿಶ್ವಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ `ಜಿಡಿಪಿ' ಶೇ 5.5ರಷ್ಟು ಪ್ರಗತಿ ದಾಖಲಿಸಿದೆ ಎಂದು ಅಂದಾಜಿಸಿದೆ. 2014-15ರ ವೇಳೆಗೆ ಇದು ಶೇ 7ರ ಗಡಿ ದಾಟಬಹುದು ಎಂದರು.ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.6ರಷ್ಟು `ಜಿಡಿಪಿ' ದಾಖಲಾಗಬಹುದು ಎಂದು ಹಿರಿಯ ಆರ್ಥಿಕ ಸಲಹೆಗಾರ ರಘುರಾಮ್ ರಾಜನ್  ವಿಶ್ವಾಸ ವ್ಯಕ್ತಪಡಿಸಿದರು.

ಸ್ಕೈಬಾಕ್ಸ್ - ಎಸ್‌ಇಪಿಎಲ್ ಮೈತ್ರಿ

ಬೆಂಗಳೂರು: ಪ್ರೊಆಕ್ಟಿವ್ ಸೆಕ್ಯುರಿಟಿ ರಿಸ್ಕ್ ಮ್ಯೋನೇಜ್‌ಮೆಂಟ್ ಸಲ್ಯೂಷನ್ಸ್ ವಿಭಾಗದ `ಸ್ಕೈಬಾಕ್ಸ್ ಸೆಕ್ಯೂರಿಟಿ' ಕಂಪೆನಿ, ತನ್ನ ಜಾಗತಿಕ ಪಾಲುದಾರರ ಜಾಲಕ್ಕೆ `ಎಸ್‌ಇಪಿಎಲ್' ಸಂಸ್ಥೆಯನ್ನು ಹೊಸದಾಗಿ ಸೇರಿಸಿಕೊಂಡಿದೆ.ಸ್ಕೈಬಾಕ್ಸ್ ಜತೆಗೂಡಿರುವುದರಿಂದ ಫೈರ್‌ವಾಲ್ ಚೇಂಜ್ ಮ್ಯೋನೇಜ್‌ಮೆಂಟ್ ಪ್ರೊಸೆಸ್ ನಿರ್ವಹಣೆ ಮತ್ತು ನೆಟ್‌ವರ್ಕ್ ರಿಸ್ಕ್ ಗಮನಿಸಲು ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಎಸ್‌ಇಪಿಎಲ್‌ನ `ಎಂಡಿ' ಪ್ರತೀಕ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry