ಶುಕ್ರವಾರ, ನವೆಂಬರ್ 22, 2019
19 °C

ಮೂಲಸೌಕರ್ಯ `ಅಸೋಚಾಂ' ಸಲಹೆ

Published:
Updated:

ಬೆಂಗಳೂರು: ಮೂಲಸೌಕರ್ಯ ಪ್ರಗತಿ ಕಡೆಗಣಿಸಿರುವುದರಿಂದಲೇ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಗಣನೀಯವಾಗಿ ಕುಸಿದಿದೆ. ಮಾಹಿತಿ ತಂತ್ರಜ್ಞಾನ  ಮತ್ತು ಹೊರಗುತ್ತಿಗೆ ಉದ್ಯಮಗಳು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿವೆ ಎಂದು `ಭಾರತೀಯ ವಾಣಿಜ್ಯೋದ್ಯಮಮಹಾಸಂಘ'ದ(ಅಸೋಚಾಂ) ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಗಮನ ಸೆಳೆದರು.ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿದರು.`ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್' ಯೋಜನೆಯನ್ನು ಚಿತ್ರದುರ್ಗದವರೆಗೂ ವಿಸ್ತರಿಸಲು ಕೇಂದ್ರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಈ ಯೋಜನೆಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ  ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಬೇಕು. ಇದರಿಂದ ಬೆಂಗಳೂರು ಹೊರತುಪಡಿಸಿ ಇತರೆ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಬಂಡವಾಳ ಹೂಡಿಕೆ ಆಕರ್ಷಿಸಬಹುದು ಎಂದರು.

ಪ್ರತಿಕ್ರಿಯಿಸಿ (+)