`ಮೂಲಸೌಕರ್ಯ ಈಡೇರಿಕೆ ಪ್ರಾಮಾಣಿಕ ಪ್ರಯತ್ನ'

ಗುರುವಾರ , ಜೂಲೈ 18, 2019
28 °C

`ಮೂಲಸೌಕರ್ಯ ಈಡೇರಿಕೆ ಪ್ರಾಮಾಣಿಕ ಪ್ರಯತ್ನ'

Published:
Updated:

ಶಿರಹಟ್ಟಿ: ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ಗಳಿಸಿ ನಾನು ಶಾಸಕನಾಗಿ ಆಯ್ಕೆಯಾಗ್ದ್ದಿದೇನೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸುತ್ತೆನೆ. ಜನತೆಯ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯದಂತೆ ಪ್ರಾಮಾಣಿಕವಾಗಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.ಇತ್ತೀಚಿಗೆ ತಾಲ್ಲೂಕು ಹೆಬ್ಬಾಳ, ಕನಕವಾಡ, ಚವಡಾಳ, ಸಾಸಲವಾಡ, ತೂಳಲಿ, ಕಲ್ಲಾಗನೂರ ಗ್ರಾಮಗಳಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ರಾಮಕೃಷ್ಣ ದೊಡ್ಡಮನಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶೌಚಾಲಯ, ಕುಡಿಯುವ ನೀರು, ರಸ್ತೆ, ಗಟಾರ, ವಿದ್ಯುತ್ ದೀಪ ಸೇರಿದಂತೆ ಹಲವು ಸೌಲಭ್ಯಗಳಿಲ್ಲದೆ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ಗ್ರಾಮಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ನನೆಗುದಿಗೆ ಬಿದ್ದಿರುವ ಇಟಗಿ ಸಾಸಲವಾಡ ಏತ ನೀರಾವರಿ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಲು ಪ್ರಯತ್ನಿಸಲಾಗುವುದು.ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನತೆ ತೀವ್ರ ಸಮಸ್ಯೆ ಅನುಭವಿಸುತ್ತಿದ್ದು. ಎರಡು ವರ್ಷಗಳಲ್ಲಿ ಎಲ್ಲಾ ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು, ಕಾಲುವೆಗಳನ್ನು ಬೇಗನೆ ಸರಿಪಡಿಸಿ ರೈತರ ಹೊಲಗಳಿಗೆ ನೀರು ಬೀಡಲಾಗುವುದು ಎಂದು ತಿಳಿಸಿದರು.ಗ್ರಾಮಸ್ಥರು ಬಸವ ವಸತಿ ಮನೆ ನಿರ್ಮಿಸಿಕೊಡುವಂತೆ ಹಾಗೂ ರಸ್ತೆ ದುರಸ್ತಿ ಸರಿಪಡಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಗಡ್ಡದೇವರಮಠ, ಗುರುಪಾದ ದೇವರಮಠದ ಸಣ್ಣ ಹಾಲ ಸ್ವಾಮಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಣ್ಣ ಮುಂಡವಾಡ,  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ ಮುಂಡವಾಡ, ಕೆಸಿಸಿ ಸದಸ್ಯ ಯು.ಎನ್.ಹೂಳಲಾಪೂರ, ಶಿರಹಟ್ಟಿ ಬಾಕ್ಲ್ ಕಮೀಟಿ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ಲಕ್ಷ್ಮೇಶ್ವರ ಬಾಕ್ಲ್ ಕಮೀಟಿ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ವೈ.ಎಸ್.ಪಾಟೀಲ, ಟಿ.ಬಿ. ಮುಂಡವಾಡ, ಎಸ್.ಟಿ.ತೆಗ್ಗಿನಮನಿ, ತಿರಕಯ್ಯ ಹೀರೆಮಠ, ಪಿ.ಕೆ ಪಾಟೀಲ, ಮಹೇಶ ಕಾಮರಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry