ಮೂಲಸೌಕರ್ಯ ವಲಯ: ವೃದ್ಧಿ ದರ ಕುಂಠಿತ

ಸೋಮವಾರ, ಜೂಲೈ 22, 2019
24 °C

ಮೂಲಸೌಕರ್ಯ ವಲಯ: ವೃದ್ಧಿ ದರ ಕುಂಠಿತ

Published:
Updated:

ನವದೆಹಲಿ (ಪಿಟಿಐ): ಒಟ್ಟಾರೆ ಕೈಗಾರಿಕಾ ಬೆಳವಣಿಗೆಯಲ್ಲಿ  ಮಹತ್ವದ  ಪಾತ್ರ ನಿರ್ವಹಿಸುವ ಆರು ಪ್ರಮುಖ ಮೂಲ ಸೌಕರ್ಯ ವಲಯಗಳಲ್ಲಿನ ಬೆಳವಣಿಗೆಯು ಏಪ್ರಿಲ್ ತಿಂಗಳಿನಲ್ಲಿ ಕುಂಠಿತಗೊಂಡಿದೆ.ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಶೇ 27ರಷ್ಟು ಪಾಲು ಹೊಂದಿರುವ ಆರು ಪ್ರಮುಖ ಮೂಲ  ಸೌಕರ್ಯ ವಲಯಗಳು ಮಾರ್ಚ್ ತಿಂಗಳಲ್ಲಿ ಶೇ 7.5ರಷ್ಟು ಮತ್ತು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 15.5ರಷ್ಟು ಬೆಳವಣಿಗೆ ದಾಖಲಿಸಿದ್ದವು.

 

ಮೂಲ ಸೌಕರ್ಯ ವಲಯದ ಈ ಕುಂಠಿತ ಬೆಳವಣಿಗೆಯು, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ರೂಪದಲ್ಲಿ ಅಳೆಯಲಾಗುವ ಆರ್ಥಿಕ  ವೃದ್ಧಿ ದರವು ಸಾಧಾರಣ ಮಟ್ಟದಲ್ಲಿ ಇರುವುದನ್ನು ಸೂಚಿಸುತ್ತದೆ. 2010-11ರ ನಾಲ್ಕನೇ ತ್ರೈಮಾಸಿಕದ `ಜಿಡಿಪಿ~ ಶೇ 7.8ರಷ್ಟು ದಾಖಲಾಗಿದೆ.

 

ಇದು 5 ತ್ರೈಮಾಸಿಕಗಳಲ್ಲಿನ ಅತ್ಯಂತ ಕಡಿಮೆ ಪ್ರಮಾಣದ ವೃದ್ಧಿ ದರವಾಗಿದೆ. ಶೇ 8ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಸಮಗ್ರ ಹಣದುಬ್ಬರವು ಆರ್ಥಿಕ ಪ್ರಗತಿ ಕುಂಠಿತಗೊಳ್ಳಲು ಇನ್ನೊಂದು ಮುಖ್ಯ ಕಾರಣ ಎನ್ನಲಾಗುತ್ತಿದೆ.

 

ಸಿಮೆಂಟ್ ಉತ್ಪಾದನೆ ಮತ್ತು ಉಕ್ಕು ಉತ್ಪನ್ನ ತಯಾರಿಕೆಯಲ್ಲಿನ ಕುಸಿತವು ಮೂಲ ಸೌಕರ್ಯ ರಂಗದ ವಿಸ್ತರಣೆಗೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ. ಕಚ್ಚಾ ತೈಲ, ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನೆ ಕೂಡ ವೃದ್ಧಿ ದರ ಹಿನ್ನಡೆಗೆ ಕಾರಣವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry