ಭಾನುವಾರ, ಏಪ್ರಿಲ್ 11, 2021
21 °C

ಮೂಲಸೌಲಭ್ಯಗಳಿಂದ ವಂಚಿತವಾದ ಹಾವಿನಹಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಇಲ್ಲಿಗೆ ಸಮೀಪದ ಹಾವಿನಹಾಳು ಗ್ರಾಮದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನೆರೆ ಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸುವ ಕಾರ್ಯದಲ್ಲಿ ಜಿಲ್ಲಾಡಳಿತ ಆಮೆ ವೇಗದಲ್ಲಿ  ಸಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.ನಿರ್ಮಾಣ ಹಂತದಲ್ಲಿರುವ ಪುನರ್ ವಸತಿ ಕಾಲೋನಿಯಲ್ಲಿ ಅರೆಬರೆ ನಿರ್ಮಾಣವಾದ ಮನೆ, ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಸೇರಿದಂತೆ ಮೂಲ ಸೌಲಭ್ಯದಿಂದ ವಂಚಿತ ಗೊಂಡಿದ್ದು, ನಿರಾಶ್ರಿತರು ಅತಂತ್ರಗೊಂಡಿದ್ದಾರೆ.ಇತ್ತೀಚೆಗೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಹಳ್ಳದ ದಂಡೆ ಹತ್ತಿರ ವಾಸಿಸುವ ಕುಟುಂಬಕ್ಕೆ ವಸತಿ ಹಂಚಿಕೆಯಲ್ಲಿ ಮೊದಲು ಆದ್ಯತೆ ನೀಡುವಂತೆ ಆದೇಶಿಸಿದ್ದರು. ಮನೆ ಹಂಚಿಕೆ ಬಗ್ಗೆ ಸಂತ್ರಸ್ತರಲ್ಲೆ ಅಸಮಾ ಧಾನ ಇರುವ ಕಾರಣ ಹಂಚಿಕೆ ಸ್ಥಗಿತ ಗೊಂಡಿದೆ. ಈ ಬಗ್ಗೆ ಕಾಳಜಿ ವಹಿಸ ಬೇಕಾದ ಜಿಲ್ಲಾಡಳಿತ ಮೌನವಾಗಿದೆ.ಪುನರ್ ವಸತಿ ನಿರ್ಮಿಸಲು ಜಿಲ್ಲಾಡಳಿತ ಎಕರೆಗೆ 3.50ಲಕ್ಷರೂ. ನಂತೆ 14ಎಕರೆ ಜಮೀನು ಖರಿದಿಸಿತ್ತು. ಒಟ್ಟು 252ಮನೆ ನಿರ್ಮಿಸುವ ಉದ್ದೇಶ ಹೊಂದಿತ್ತು. ಇದರಲ್ಲಿ 150 ಮನೆ ಪೂರ್ಣಗೊಂಡರೆ. 49 ಸಂತ್ರಸ್ತ ಕುಟುಂಬಕ್ಕೆ ಹಂಚಿಕೆಯಾಗಿದೆ. 25ಮನೆ ಅರೆಬರೆ ನಿಮಾರ್ಣ ಗೊಂಡಿದೆ. ಇವುಗಳಲ್ಲಿ ಉಳಿದ ಮನೆಗಳು ಹಂಚಿಕೆಗಾಗಿ ಕಾಯುತ್ತಿವೆ.ಕಾಲೋನಿಯಲ್ಲಿ ಮಣ್ಣಿನ ರಸ್ತೆಗಳಿದ್ದು ಮಳೆ ಬಂದರೆ ಕೆಸರು ಗದ್ದೆಯಾಗುತ್ತಿವೆ. ಚರಂಡಿಗೆ ಕಲ್ಲಿನ ಕಟ್ಟಡ ಇಲ್ಲದ ಕಾರಣ ಮಣ್ಣಿನ ಚರಂಡಿಯಲ್ಲಿ ಮುಳ್ಳಿನ ಗಿಡ ಬೆಳೆದು ಮುಚ್ಚುವ ಹಂತ ತಲುಪಿವೆ.ಗ್ರಾಮದಿಂದ ಅಂದಾಜು ಒಂದು ಕಿ.ಮೀ. ದೂರದಲ್ಲಿ ಇರುವ ಪುನರ್‌ವಸತಿ ಗೃಹಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಲ್ಲಿ ವಾಸಿಸುತ್ತಿರುವ 49 ಕುಟುಂಬ ಕತ್ತಲಿಗೆ ತುತ್ತಾಗಿವೆ. ಇದರಿಂದ ಮಕ್ಕಳ ವಿದ್ಯಾ ಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಕೆಲವು ಆಸಕ್ತರು ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ.  ಕನಿಷ್ಠ ಕುಡಿವ ನೀರಿನ ಸೌಲಭ್ಯವೂ ಇಲ್ಲ. ನೀರಿಗಾಗಿ ಕಿಮೀ. ದೂರ ಪರದಾಡಬೇಕಿದೆ. ಕುಡಿಯುವ ನೀರು ಸರಬರಾಜಿಗೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದೊಂದು ಕಾಡಿನ ವಾಸ ಎಂದು ಸಂತ್ರಸ್ತರು ಗೋಳಾಡಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.